ಬಿಡಬ್ಲ್ಯುಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್ಶಿಪ್ | 2008ರ ನಂತರ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ತನ್ವಿ ಶರ್ಮಾ

ತನ್ವಿ ಶರ್ಮಾ | Photo Credit : ddnews.gov.in
ಹೊಸದಿಲ್ಲಿ, ಅ.17: ಜಪಾನಿನ ಸಾಕಿ ಮಟ್ಸುಮೊಟೊರನ್ನು ಕ್ವಾರ್ಟರ್ ಫೈನಲ್ ನಲ್ಲಿ ಮಣಿಸಿದ 16ರ ಹರೆಯದ ತನ್ವಿ ಶರ್ಮಾ 2008ರ ನಂತರ ಬಿಡಬ್ಲ್ಯುಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆದ್ದಿರುವ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು.
ತನ್ವಿ ಅವರು ಇದೀಗ ಕಂಚಿನ ಪದಕವನ್ನು ಖಚಿತಪಡಿಸಿದರು. ಗುವಾಹಟಿಯಲ್ಲಿ ಈಗ ನಡೆಯುತ್ತಿರುವ 2025ರ ಆವೃತ್ತಿಯ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ದೃಢಪಡಿಸಿದರು.
ಶುಕ್ರವಾರ 46 ನಿಮಿಷಗಳಲ್ಲಿ ಕೊನೆಗೊಂಡ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಮೊದಲ ಶ್ರೇಯಾಂಕದ ತನ್ವಿ ಅವರು ಜಪಾನ್ ಆಟಗಾರ್ತಿಯನ್ನು 3 ಗೇಮ್ಗಳ ರೋಚಕ ಪಂದ್ಯದಲ್ಲಿ 13-15,15-9, 15-10 ಅಂತರದಿಂದ ಮಣಿಸಿದರು.
ಪುಣೆಯಲ್ಲಿ 2008ರಲ್ಲಿ ನಡೆದಿದ್ದ ಚಾಂಪಿಯನ್ಶಿಪ್ನಲ್ಲಿ ಸೈನಾ ನೆಹ್ವಾಲ್ ಚಿನ್ನದ ಪದಕ ಗೆದ್ದ ನಂತರ ಭಾರತವು ಇಂದು ಮೊದಲ ಬಾರಿ ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆದ್ದಿದೆ.
*ಬಿಡಬ್ಲ್ಯುಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್ಶಿಪ್: ಸಿಂಗಲ್ಸ್ ಪದಕ ಗೆದ್ದ ಭಾರತೀಯ ಬಾಲಕಿಯರು
ಅಪರ್ಣಾ ಪೋಪಟ್-ಬೆಳ್ಳಿ(1996, ಸಿಲ್ಕ್ಬರ್ಗ್)
ಸೈನಾ ನೆಹ್ವಾಲ್-ಬೆಳ್ಳಿ(2006, ಇಂಚಿಯೋನ್)
ಸೈನಾ ನೆಹ್ವಾಲ್-ಚಿನ್ನ(2008, ಪುಣೆ)
ತನ್ವಿ ಶರ್ಮಾ-ಕಂಚು*(2025, ಗುವಾಹಟಿ)







