ಯು.ಎಸ್.ಓಪನ್ಗೆ ಕಾರ್ಲೊಸ್ ಅಲ್ಕರಾಝ್ ವಾಪಸ್

ಕಾರ್ಲೊಸ್ ಅಲ್ಕರಾಝ್ | Photo Credit : PTI
ನ್ಯೂಯಾರ್ಕ್: ಮಣಿಕಟ್ಟಿನ ಗಾಯದಿಂದಾಗಿ ನಾಲ್ಕು ತಿಂಗಳುಗಳಿಂದ ಸಕ್ರಿಯ ಟೆನಿಸ್ನಿಂದ ದೂರವೇ ಉಳಿದಿದ್ದ ಕಾರ್ಲೊಸ್ ಅಲ್ಕರಾಝ್ ಮುಂಬರುವ ಯು.ಎಸ್. ಓಪನ್ನಲ್ಲಿ ಆಡುವುದಾಗಿ ದೃಢಪಡಿಸಿದ್ದಾರೆ.
ಸ್ಪೇನ್ ಆಟಗಾರ ಅಲ್ಕರಾಝ್ ಎಪ್ರಿಲ್ 14ರಿಂದ ಯಾವುದೇ ಸ್ಪರ್ಧಾತ್ಮಕ ಟೂರ್ನಿಗಳಲ್ಲಿ ಆಡಿಲ್ಲ. ಸದ್ಯ ಗಾಯದಿಂದ ಚೇತರಿಸಿಕೊಂಡಿರುವ ಅಲ್ಕರಾಝ್ ಅವರು ವಿಂಬಲ್ಡನ್ ಹಾಗೂ ಫ್ರೆಂಚ್ ಓಪನ್ ಟೂರ್ನಿಗಳಿಂದ ವಂಚಿತರಾಗಿದ್ದರು.
ಪತ್ರಕರ್ತ ಫ್ಯಾಬ್ರಿಝಿಯೊ ರೊಮಾನೊರೊಂದಿಗೆ ಜಂಟಿ ಪೋಸ್ಟ್ ಹಾಕಿರುವ ಅಲ್ಕರಾಝ್ ಅಮೆರಿಕದ ಧ್ವಜ ಹಾಗೂ ವಿಮಾನದ ಚಿತ್ರದೊಂದಿಗೆ ಈ ಸುದ್ದಿಯನ್ನು ಖಚಿತಪಡಿಸಿದರು.
ಎಪ್ರಿಲ್ನಲ್ಲಿ ಬಾರ್ಸಿಲೋನ ಓಪನ್ನಲ್ಲಿ ಅಲ್ಕರಾಝ್ ಗಾಯಗೊಂಡ ನಂತರ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ವಿಶ್ವದ ನಂ.2ನೇ ಆಟಗಾರನಾಗಿ ಹೊರಹೊಮ್ಮಿದ್ದರು.
ಮಾಂಟೆ ಕಾರ್ಲೊ ಮಾಸ್ಟರ್ಸ್ನಲ್ಲಿ ಅಲ್ಕರಾಝ್ ಅವರನ್ನು ಸೋಲಿಸಿದ ನಂತರ ಜನ್ನಿಕ್ ಸಿನ್ನರ್ ಎಟಿಪಿ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ್ದ್ದಾರೆ.
2025ರ ಯುಎಸ್ಓಪನ್ ಫೈನಲ್ನಲ್ಲಿ ಸಿನ್ನರ್ರನ್ನು ನಾಲ್ಕು ಸೆಟ್ಗಳಿಂದ ಮಣಿಸಿದ್ದ ಅಲ್ಕರಾಝ್ ಮೂರನೇ ಬಾರಿ ಟ್ರೋಫಿ ಜಯಿಸಿದ್ದರು.
ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯು ಆಗಸ್ಟ್ 30ರಿಂದ ಆರಂಭವಾಗಲಿದೆ.






