ಚೆನ್ನೈ ಗ್ರಾಂಡ್ ಮಾಸ್ಟರ್ಸ್- 2025 ಚೆಸ್ ಪಂದ್ಯಾವಳಿ : ಅರ್ಜುನ್ ಎರಿಗೈಸಿಗೆ ಸುಲಭ ವಿಜಯ

Photo Credit: RAGU R/The Hindu
ಚೆನ್ನೈ, ಆ. 7: ಚೆನ್ನೈಯಲ್ಲಿ ಗುರುವಾರ ಆರಂಭಗೊಂಡಿರುವ ಚೆನ್ನೈ ಗ್ರಾಂಡ್ ಮಾಸ್ಟರ್ಸ್ 2025 ಚೆಸ್ ಪಂದ್ಯಾವಳಿಯ ಆರಂಭಿಕ ದಿನದಂದು ಅಗ್ರ ಶ್ರೇಯಾಂಕದ ಅರ್ಜುನ್ ಎರಿಗೈಸಿ ಮೊದಲ ಸುತ್ತಿನಲ್ಲಿ ಅಮೆರಿಕದ ಅವೊಂಡರ್ ಲಿಯಾಂಗ್ ವಿರುದ್ಧ ಸುಲಭ ಜಯವನ್ನು ದಾಖಲಿಸಿದರು.
ಬಿಳಿ ಕಾಯಿಗಳೊಂದಿಗೆ ಆಡಿದ ಆರನೇ ವಿಶ್ವ ರ್ಯಾಂಕಿಂಗ್ನ ಎರಿಗೈಸಿ ಆರಂಭದಲ್ಲೇ ಮುನ್ನಡೆಯನ್ನು ಗಳಿಸಿದರು ಹಾಗೂ ಬಳಿಕ ನಿರಂತರವಾಗಿ ಎದುರಾಳಿಯ ರಕ್ಷಣೆಯ ಮೇಲೆ ದಾಳಿಗೈದರು. 420ನೇ ನಡೆಯಲ್ಲಿ ಅವರ ಎದುರಾಳಿ ಸೋಲನ್ನು ಒಪ್ಪಿಕೊಂಡರು.
ಇನ್ನೊಂದು ಜಿದ್ದಾಜಿದ್ದಿನ ಮೊದಲ ಸುತ್ತಿನ ಪಂದ್ಯದಲ್ಲಿ, ಜರ್ಮನಿಯ ವಿನ್ಸೆಂಟ್ ಕೇಮರ್ ಭಾರತದ ನಿಹಾಲ್ ಸಾರಿನ್ರನ್ನು ಸೋಲಿಸಿದರು. 20 ವರ್ಷದ ಕೇಮರ್ ಪಂದ್ಯದ ಹೆಚ್ಚಿನ ಸಮಯದಲ್ಲಿ ಮೇಲುಗೈ ಪಡೆದರು. ಬಳಿಕ ಪಂದ್ಯವು ಸಮಯ ಮಿತಿಗೆ ಸರಿದಾಗ ನಿಹಾಲ್ ಸ್ವಲ್ಪ ಮುನ್ನಡೆ ಗಳಿಸಿದರು.
ಆದರೆ, ಕೇಮರ್ರ ಮುನ್ನಡೆಯನ್ನು ಹಿಂದಿಕ್ಕಲು ನಿಹಾಲ್ಗೆ ಸಾಧ್ಯವಾಗಲಿಲ್ಲ. 51ನೇ ನಡೆಯ ಬಳಿಕ ನಿಹಾಲ್ ಸೋಲೊಪ್ಪಿಕೊಂಡರು.





