ಚೀನಾ ಓಪನ್ | ಕಾರ್ಲೊಸ್ ಅಲ್ಕರಾಝ್ ಫೈನಲ್ಗೆ ಲಗ್ಗೆ
ಕಾರ್ಲೊಸ್ ಅಲ್ಕರಾಝ್ | PC : NDTV
ಬೀಜಿಂಗ್ : ನಾಲ್ಕು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ನಲ್ಲಿ ಸ್ಪೇನ್ ಆಟಗಾರ ಅಲ್ಕರಾಝ್ ಅವರು ರಶ್ಯದ ಡೇನಿಯಲ್ ಮೆಡ್ವೆಡೆವ್ರನ್ನು 7-5, 6-3 ಸೆಟ್ಗಳಿಂದ ಮಣಿಸಿದರು.
ಎರಡನೇ ಶ್ರೇಯಾಂಕದ ಅಲ್ಕರಾಝ್ ಫೈನಲ್ನಲ್ಲಿ ವಿಶ್ವದ ನಂ.1 ಆಟಗಾರ ಹಾಗೂ ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಅಥವಾ ಚೀನಾದ ವೈರ್ಲ್ಡ್ ಕಾರ್ಡ್ ಆಟಗಾರ ಬೂ ಯೂನ್ಚಾವೊಕೆಟ್ರನ್ನು ಎದುರಿಸಲಿದ್ದಾರೆ.
21ರ ಹರೆಯದ ಅಲ್ಕರಾಝ್ ಬೀಜಿಂಗ್ನಲ್ಲಿ ಇದೇ ಮೊದಲ ಬಾರಿ ಫೈನಲ್ಗೆ ಪ್ರವೇಶಿಸಿದ್ದು, ಅಲ್ಕರಾಝ್ ಸಹ ಆಟಗಾರ, ಟೆನಿಸ್ ದಂತಕತೆ ರಫೆಲ್ ನಡಾಲ್ ನಾಲ್ಕು ಬಾರಿ ಈ ಸಾಧನೆ ಮಾಡಿದ್ದಾರೆ.
ಯು.ಎಸ್. ಓಪನ್ನಲ್ಲಿ ಎರಡನೇ ಸೆಟ್ ನಿರ್ಗಮನದಿಂದ ಚೇತರಿಸಿಕೊಳ್ಳುವತ್ತ ಚಿತ್ತಹರಿಸಿರುವ ಅಲ್ಕರಾಝ್ ಕಳೆದ ಬಾರಿಯ ಫೈನಲಿಸ್ಟ್ ಮೆಡ್ವೆಡೆವ್ರನ್ನು ಮೊದಲ ಸೆಟ್ನಲ್ಲಿ 7-5 ಅಂತರದಿಂದ ಮಣಿಸಿದರು. 2ನೇ ಸೆಟ್ಟನ್ನೂ ಸುಲಭವಾಗಿ ಗೆದ್ದಿರುವ ಅಲ್ಕರಾಝ್ ತನ್ನ 16ನೇ ಎಟಿಪಿ ಟೂರ್ ಪ್ರಶಸ್ತಿ ಗೆಲ್ಲುವುದರಿಂದ ಒಂದು ಹೆಜ್ಜೆ ಹಿಂದಿದ್ದಾರೆ.
ಬುಧವಾರ ಫೈನಲ್ ಪಂದ್ಯ ನಡೆಯಲಿದೆ.