ಚೆನ್ನೈ ಓಪನ್ | ಪೊಲ್ಯಾಂಡ್ನ ಲಿನೆಟ್ ಚಾಂಪಿಯನ್

Photo Credit: sportstar
ಚೆನ್ನೈ: ಆರಂಭಿಕ ಸೆಟ್ ಸೋಲಿನಿಂದ ಬೇಗನೆ ಹೊರ ಬಂದ ಪೋಲ್ಯಾಂಡ್ ಆಟಗಾರ್ತಿ ಮ್ಯಾಗ್ಡ ಲಿನೆಟ್ 2026ರ ಆವೃತ್ತಿಯ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಎರಡು ಗಂಟೆ, 49 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಲಿನೆಟ್ ಅವರು ಹಾಲಿ ಚಾಂಪಿಯನ್ ಇಂಡೋನೇಶ್ಯದ ಜಾನಿಸ್ ಜೆನ್ರನ್ನು 5-7, 6-1, 6-4 ಸೆಟ್ಗಳ ಅಂತರದಿಂದ ಮಣಿಸಿದರು.
75ನೇ ರ್ಯಾಂಕಿನ ಜೆನ್ ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದ ನಂತರ ಫೈನಲ್ಗೆ ತಲುಪಿದ್ದರು. ಮೊದಲ ಸೆಟ್ ಸೋಲಿನಿಂದ ಚೇತರಿಸಿಕೊಂಡ ಲಿನೆಟ್ ಪಂದ್ಯದ ಮೇಲೆ ಹಿಡಿತ ಸಾಧಿಸಿ ಹಾರ್ಡ್ ಕೋರ್ಟ್ನಲ್ಲಿ ಚಾಂಪಿಯನ್ಶಿಪ್ ಜಯಿಸಿದರು.
ಪಂದ್ಯಾವಳಿಯಲ್ಲಿ ಸತತ ಐದು ಪಂದ್ಯಗಳನ್ನು ಜಯಿಸಿರುವ ಲಿನೆಟ್ ಪ್ರಶಸ್ತಿ ಎತ್ತಿ ಹಿಡಿದರು. 2022ರಲ್ಲಿ ಚೆನ್ನೈ ಓಪನ್ನಲ್ಲಿ ರನ್ನರ್ ಅಪ್ ಆಗಿದ್ದ ಲಿನೆಟ್ ಇದೀಗ ನಾಲ್ಕನೇ ಟೂರ್ ಮಟ್ಟದ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯವು ರವಿವಾರ ಸಂಜೆ 6:30ಕ್ಕೆ ಚೆನ್ನೈನಲ್ಲಿ ನಿಗದಿಯಾಗಿತ್ತು. ಆದರೆ ಮಳೆ ಹಾಗೂ ಕಲುಷಿತ ಗಾಳಿಯಿಂದಾಗಿ ಪಂದ್ಯವು ಪದೇ ಪದೇ ವಿಳಂಬವಾಯಿತು. ಮಳೆಯಿಂದಾಗಿ ಪಂದ್ಯ ನಿಂತರೂ ಟೆನಿಸ್ ಅಂಗಳವನ್ನು ಸಿದ್ಧಪಡಿಸಲಾಗಿತ್ತು. ದೀಪಾವಳಿ ಪಟಾಕಿಯಿಂದ ಗೋಚರತೆ ಕಡಿಮೆಯಾಗಿದ್ದು, ಇದರಿಂದಾಗಿ ಆಯೋಜಕರು ಪಂದ್ಯವನ್ನು ರದ್ದುಪಡಿಸಿ ಸೋಮವಾರಕ್ಕೆ ಮುಂದೂಡಿದರು.






