ಚೀನಾ ಓಪನ್ ಟೆನಿಸ್ ಟೂರ್ನಿ| ಸಿನ್ನರ್ಗೆ ಸೋಲು, ಅಲ್ಕರಾಝ್ ಚಾಂಪಿಯನ್
ಕಾರ್ಲೊಸ್ ಅಲ್ಕರಾಝ್ | PC : X
ಬೀಜಿಂಗ್ : ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ರನ್ನು ಸದೆ ಬಡಿದ ಕಾರ್ಲೊಸ್ ಅಲ್ಕರಾಝ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಬುಧವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಆಟಗಾರ ಅಲ್ಕರಾಝ್ ಅಗ್ರ ರ್ಯಾಂಕಿನ ಸಿನ್ನರ್ರನ್ನು 6-7(6), 6-4, 7-6(3) ಸೆಟ್ಗಳ ಅಂತರದಿಂದ ಮಣಿಸಿದರು.
3ನೇ ರ್ಯಾಂಕಿನ ಆಟಗಾರ ಅಲ್ಕರಾಝ್ ಅವರು ಈ ವರ್ಷ ಸಿನ್ನರ್ ಎದುರು ಆಡಿರುವ ಎಲ್ಲ 3 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ.
ಇಟಲಿ ಆಟಗಾರ ಸಿನ್ನರ್ ಅವರ 14 ಪಂದ್ಯಗಳ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದ ಅಲ್ಕರಾಝ್ ಸತತ ಮೂರನೇ ಪ್ರಶಸ್ತಿಯನ್ನು ನಿರಾಕರಿಸಿದರು. ಸಿನ್ನರ್ ಅವರು ಸಿನ್ಸಿನಾಟಿ ಹಾಗೂ ಯು.ಎಸ್. ಓಪನ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಸಿನ್ನರ್ ಹಾಗೂ ಅಲ್ಕರಾಝ್ ಈ ವರ್ಷದ ಎಲ್ಲ 4 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಪೈಕಿ ತಲಾ ಎರಡನ್ನು ಗೆದ್ದುಕೊಂಡಿದ್ದಾರೆ. ಸಿನ್ನರ್ ಅವರು ಆಸ್ಟ್ರೇಲಿಯನ್ ಓಪನ್ ಹಾಗೂ ಯು.ಎಸ್. ಓಪನ್ ಜಯಿಸಿದರೆ, ಅಲ್ಕರಾಝ್ ಅವರು ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ಶಿಪ್ ಗೆದ್ದಿದ್ದಾರೆ.
ಚೀನಾ ಓಪನ್ನಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಜಯಿಸಿದ ಇಟಲಿಯ ಸೈಮನ್ ಬೊಲೆಲಿ ಹಾಗೂ ಫ್ಯಾಬಿಯೊ ಫೊಗ್ನಿನಿ ಟ್ರೋಫಿಯೊಂದಿಗೆ. ಈ ಜೋಡಿಯು ಫಿನ್ಲ್ಯಾಂಡ್ನ ಹ್ಯಾರಿ ಹೆಲಿಯೊವಾರಾ ಹಾಗೂ ಬ್ರಿಟನ್ನ ಹೆನ್ರಿ ಪ್ಯಾಟನ್ರನ್ನು ಸೋಲಿಸಿದ್ದಾರೆ.