ಅರುಣಾಚಲದ ಅತ್ಲೀಟ್ ಗಳಿಗೆ ಚೀನಾ ಸ್ಟೇಪಲ್ ವೀಸಾ: ಕ್ರೀಡಾಕೂಟದಿಂದ ಹಿಂದೆ ಸರಿದ ಭಾರತದ ವುಶು ತಂಡ

ಹೊಸದಿಲ್ಲಿ: ಅರುಣಾಚಲ ಪ್ರದೇಶದ ಮೂವರು ಅತ್ಲೀಟ್‌ಗಳಿಗೆ ಚೀನಾವು ಸ್ಟೇಪಲ್ಡ್ ವೀಸಾ ನೀಡಿದ ನಂತರ ಭಾರತವು ತನ್ನ ಮಾರ್ಷಲ್ ಸ್ಪೋಟ್ಸ್ ವುಶುವಿನಲ್ಲಿ ಭಾಗವಹಿಸಲಿರುವ ಸಂಪೂರ್ಣ ತಂಡವನ್ನು ಚೀನಾದಲ್ಲಿ ನಡೆಯಲಿರುವ ಕ್ರೀಡಾಕೂಟದಿಂದ ಹಿಂಪಡೆದಿದೆ ಎಂದು The Indian Express. ವರದಿ ಮಾಡಿದೆ.
ಅರುಣಾಚಲ ಪ್ರದೇಶ ತನಗೆ ಸೇರಿದ್ದು, ಅಲ್ಲಿಂದ ಬಂದ ಭಾರತೀಯರಿಗೆ ನಿಯಮಿತ ವೀಸಾಗಳನ್ನು ನೀಡುವ ಅಗತ್ಯವಿಲ್ಲ ಎಂದು ಬೀಜಿಂಗ್ ಹೇಳಿಕೊಂಡಿದೆ. ಅದರೆ ಅದು ಚೀನಾದ ಅಧೀನದಲ್ಲಿಲ್ಲ. ಹೀಗಾಗಿ ಅಲ್ಲಿಯ ನಿವಾಸಿಗಳಿಗೆ ಪಾಸ್ ಪೋರ್ಟ್ ಗೆ ಲಗತ್ತಾದ ಪ್ರತ್ಯೇಕ ಕಾಗದದ ರೂಪದಲ್ಲಿ ಸ್ಟೇಪಲ್ ವೀಸಾ ನೀಡುತ್ತಿದೆ. ಸ್ಟೇಪಲ್ ವೀಸಾ ನೀಡಿರುವುದನ್ನು ಭಾರತ ಗುರುವಾರ ಖಂಡಿಸಿದೆ. ಈ ಕ್ರಮವು ಅಸ್ವೀಕಾರಾರ್ಹ. ಇಂತಹ ಕ್ರಮಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ತಾನು ಕಾಯ್ದುಕೊಂಡಿದ್ದೇನೆ ಎಂದು ಪ್ರತಿಪಾದಿಸಿದೆ.
ಅರುಣಾಚಲ ಪ್ರದೇಶದ ಜನರಿಗೆ ಸ್ಟೇಪಲ್ ವೀಸಾಗಳನ್ನು ನೀಡುವ ಅಭ್ಯಾಸವನ್ನು ಭಾರತವು ಆಕ್ಷೇಪಿಸಿದ ನಂತರ 2013 ರಿಂದ ಕೆಲವು ವರ್ಷಗಳಿಂದ ಇದನ್ನುಸ್ಥಗಿತಗೊಳಿಸಲಾಗಿದೆ ಎಂದುThe Hindu. ವರದಿ ಮಾಡಿದೆ.
ಬುಧವಾರ ರಾತ್ರಿ, ಐವರು ಅತ್ಲೀಟ್‌ಗಳು, ಒಬ್ಬ ತರಬೇತುದಾರ ಹಾಗೂ ಇಬ್ಬರು ಸಹಾಯಕ ಸಿಬ್ಬಂದಿಯನ್ನು ಒಳಗೊಂಡ ಎಂಟು ಸದಸ್ಯರ ತಂಡವನ್ನು ಹೊಸದಿಲ್ಲಿಯ ವಿಮಾನ ನಿಲ್ದಾಣದ ಅಧಿಕಾರಿಗಳು ಬೋರ್ಡಿಂಗ್ ಗೇಟ್ ನಲ್ಲಿ ನಿಲ್ಲಿಸಿದರು.
ಅತ್ಲೀಟ್ ಗಳು ಚೆಂಗ್ಡುವಿನಲ್ಲಿ ನಡೆಯಲಿರುವ ವರ್ಲ್ಡ್ ಯುನಿವರ್ಸಿಟಿ ಕ್ರೀಡಾಕೂಟಕ್ಕೆ ತೆರಳುವ 12 ಸದಸ್ಯರ ತಂಡದ ಭಾಗವಾಗಿದ್ದರು.
"ವಲಸೆ ಅಧಿಕಾರಿಗಳು ಹಾಗೂ CISF ಸಿಬ್ಬಂದಿ [ಕೇಂದ್ರ ಕೈಗಾರಿಕಾ ಭದ್ರತಾ ಪಡೆ] ನಮ್ಮನ್ನು ಗೇಟ್‌ನಲ್ಲಿ ನಿಲ್ಲಿಸಿದರು. ಅವರು ಯಾವುದೇ ಕಾರಣವನ್ನು ನೀಡಲಿಲ್ಲ ಅವರು ಕೇವಲ ಸರಕಾರದ ಸೂಚನೆಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ ಎನ್ನವುದಾಗಿ ಕೋಚ್ ರಾಘವೇಂದ್ರ ಸಿಂಗ್ The Indian Express.ಗೆ ತಿಳಿಸಿದರು