RCB ಅಭಿಮಾನಿಗಳಿಗೆ ಗುಡ್ನ್ಯೂಸ್ | ಆರ್ಸಿಬಿಯ ಐದು ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ

ಚಿನ್ನಸ್ವಾಮಿ ಸ್ಟೇಡಿಯಂ | Photo Credit ; PTI
ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂ 2026ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐದು ಪಂದ್ಯಗಳ ಆತಿಥ್ಯವಹಿಸುವುದು ದೃಢಪಟ್ಟಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್(ಕೆಎಸ್ಸಿಎ)ಹಾಗೂ ಆರ್ಸಿಬಿ ಅಧಿಕಾರಿಗಳು ಸೋಮವಾರ ಬಿರುಸಿನ ಚರ್ಚೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ.
ಮಾರ್ಚ್ 28ರಂದು ಆರ್ಸಿಬಿ ಆಡಲಿರುವ ಈ ವರ್ಷದ ಮೊದಲ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸುವ ಎಲ್ಲ ಸಾಧ್ಯತೆ ಇದೆ.
ಆರ್ಸಿಬಿಯ ಇನ್ನೆರಡು ತವರು ಪಂದ್ಯಗಳು ಈ ಹಿಂದಿನ ಬದ್ಧತೆಯ ಪ್ರಕಾರ ರಾಯ್ಪುರದ ಶಾಹೀದ್ ವೀರ್ ನಾರಾಯಣ್ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಫ್ರಾಂಚೈಸಿ ದೃಢಪಡಿಸಿದೆ.
ಜನವರಿಯಲ್ಲಿ ಆರ್ಸಿಬಿ ಸಿಇಒ ರಾಜೇಶ್ ಮೆನನ್ ಅವರು ಛತ್ತೀಸ್ಗಡದ ಸರಕಾರದ ಅಧಿಕಾರಿಗಳನ್ನು ಭೇಟಿಯಾಗಿ ತನ್ನ ಕೆಲವು ತವರು ಪಂದ್ಯಗಳನ್ನು ಆಡುವ ಸಾಧ್ಯತೆ ಕುರಿತು ಚರ್ಚಿಸಿದ್ದರು. ಛತ್ತೀಸ್ಗಡದ ಸಿಎಂ ವಿಷ್ಣು ದೇವೊ ಸಾಯಿ ಅವರು ನಿರ್ದಿಷ್ಟ ತೆರಿಗೆ ವಿನಾಯಿತಿ ಸಹಿತ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು.




