ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಇಡ್ಲಿ ದೋಸೆ’ ಗೀತೆ: BCCIಗೆ ದೂರು ನೀಡಿದ CSK

Photo Credit : PTI
ಬೆಂಗಳೂರು: ಎಪ್ರಿಲ್ 5ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ವಿರುದ್ಧ ನಡೆದ ಪಂದ್ಯದ ವೇಳೆ ʼದುರ್ನಡತೆ ಪ್ರದರ್ಶಿಸಲಾಗಿದೆʼ ಆರೋಪಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಧಿಕೃತವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ದೂರು ಸಲ್ಲಿಸಿದೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಕ್ರೀಡಾಂಗಣ ಮನರಂಜನೆಯನ್ನು ಅಸಮರ್ಪಕವಾಗಿ ನಿರ್ವಹಿಸಲಾಗಿದೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳು ಸೇರಿದಂತೆ ಹಲವು ಕಳವಳಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ದೂರಿನಲ್ಲಿ ಪ್ರಸ್ತಾಪಿಸಿದೆ.
ಪಂದ್ಯದ ವೇಳೆ ನುಡಿಸಲಾದ ‘ದೋಸೆ, ಇಡ್ಲಿ, ಸಾಂಬಾರ್, ಚಟ್ನಿ’ ಗೀತೆ ಏಕತಾನವಾಗಿತ್ತು ಹಾಗೂ ತಮಿಳುನಾಡು ಅಸ್ಮಿತೆಯನ್ನು ವಿಡಂಬಿಸಿದಂತಿತ್ತು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ದೂರಿನಲ್ಲಿ ಉಲ್ಲೇಖಿಸಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂಲಗಳು ತಿಳಿಸಿವೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
Next Story




