ಕಾಮನ್ವೆಲ್ತ್ ಗೇಮ್ಸ್ | ಜಾವೆಲಿನ್ ಎಸೆತ : ನೀರಜ್ ಫೈನಲ್ಗೆ ಅರ್ಹತೆ

ನೀರಜ್ ಚೋಪ್ರಾ | Photo Credit : PTI
ಗ್ಲಾಸ್ಗೊ, ಜು. 30: ಸ್ಕಾಟ್ಲ್ಯಾಂಡ್ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಗುರುವಾರ ಭಾರತದ ಅವಳಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಎಸೆತ ಸ್ಪರ್ಧೆಯ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿರುವ ಎಲ್ಲಾ ಮೂವರು ಭಾರತೀಯರು ಪದಕ ಸುತ್ತಿಗೆ ಅರ್ಹತೆ ಪಡೆದರು.
ಅರ್ಹತಾ ಸುತ್ತಿನಲ್ಲಿ, 84 ಮೀಟರ್ ಗುರುತನ್ನು ಮೀರುವವರು ತನ್ನಿಂತಾನೆ ಫೈನಲ್ಗೆ ಅರ್ಹತೆ ಪಡೆಯುತ್ತಾರೆ. ಆದರೆ, ಈ ಸುತ್ತಿನಲ್ಲಿ ಯಾವುದೇ ಸ್ಪರ್ಧಿಗೆ ಈ ಗುರುತನ್ನು ಮೀರಲು ಸಾಧ್ಯವಾಗಲಿಲ್ಲ. ಹಾಗಾಗಿ, ಶ್ರೇಷ್ಠ ಪ್ರದರ್ಶನ ನೀಡಿದ 12 ಸ್ಪರ್ಧಿಗಳು ಪದಕ ಸುತ್ತಿನ ಸ್ಪರ್ಧೆಗೆ ಅರ್ಹತೆ ಪಡೆದರು.
79.61 ಮೀಟರ್ 2018ರ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ನೀರಜ್ರ ಅತ್ಯುತ್ತಮ ಎಸೆತವಾಯಿತು. ಅವರು ಅರ್ಹತಾ ಸುತ್ತಿನಲ್ಲಿ ಐದನೇ ಸ್ಥಾನ ಪಡೆದರು.
ಕಣದಲ್ಲಿದ್ದ ಇತರ ಭಾರತೀಯರಾದ ರೋಹಿತ್ ಯಾದವ್ ಮತ್ತು ಯಶ್ ವೀರ್ ಸಿಂಗ್ ಕೂಡ ಫೈನಲ್ಗೆ ಅರ್ಹತೆ ಪಡೆದರು. ರೋಹಿತ್ರ ಅತ್ಯುತ್ತಮ ಎಸೆತ 78.37 ಮೀಟರ್ ಆದರೆ, ಯಶ್ ವೀರ್ ಸಿಂಗ್ರ ಶ್ರೇಷ್ಠ ಎಸೆತ 78.36 ಮೀಟರ್ ಆಗಿತ್ತು. ಅವರಿಬ್ಬರು ಕ್ರಮವಾಗಿ ಒಂಭತ್ತು ಮತ್ತು 10ನೇ ಸ್ಥಾನಗಳನ್ನು ಪಡೆದರು.
ಅಂತಿಮ ಸುತ್ತಿನ (ಫೈನಲ್) ಸ್ಪರ್ಧೆಗಳು ಭಾರತೀಯ ಕಾಲಮಾನ ಶನಿವಾರ ಮುಂಜಾನೆ 12:45 (ಶುಕ್ರವಾರ ಮಧ್ಯರಾತ್ರಿಯ ಬಳಿಕ)ಕ್ಕೆ ಆರಂಭಗೊಳ್ಳಲಿದೆ.
ಫೈನಲ್ಗೆ ತೇರ್ಗಡೆಗೊಂಡ ಸ್ಪರ್ಧಿಗಳು ಮತ್ತು ಅವರ ಶ್ರೇಷ್ಠ ಎಸೆತಗಳು
ರಮೇಶ್ ಪತಿರಗೆ (ಶ್ರೀಲಂಕಾ)- 82.84 ಮೀಟರ್
ಆ್ಯಂಡರ್ಸನ್ ಪೀಟರ್ಸ್ (ಗ್ರೆನಾಡ)- 81.29 ಮೀಟರ್
ಡೋವ್ ಸ್ಮಿತ್ (ದಕ್ಷಿಣ ಆಫ್ರಿಕ)- 80.64 ಮೀಟರ್
ಬೆನ್ ಈಸ್ಟ್ (ಇಂಗ್ಲೆಂಡ್)- 80.38 ಮೀಟರ್
ನೀರಜ್ ಚೋಪ್ರಾ (ಭಾರತ)- 79.61 ಮೀಟರ್
ಕ್ಯಾಮರೋನ್ ಮೆಕೆಂಟಯರ್ (ಆಸ್ಟ್ರೇಲಿಯ)- 78.91 ಮೀಟರ್
ಅರ್ಷದ್ ನದೀಮ್ (ಪಾಕಿಸ್ತಾನ)- 78.63 ಮೀಟರ್
ಕೀಶಾನ್ ಸ್ಟ್ರಾನ್ (ಬಹಾಮಾಸ್)- 78.60 ಮೀಟರ್
ರೋಹಿತ್ ಯಾದವ್ (ಭಾರತ)- 78.37 ಮೀಟರ್
ಯಶ್ ವೀರ್ ಸಿಂಗ್ (ಭಾರತ)- 78.36 ಮೀಟರ್
ಕೆಶಾರ್ನ್ ವಾಲ್ಕಟ್ (ಟ್ರಿನಿಡಾಡ್ ಮತ್ತು ಟೊಬಾಗೊ)- 78.26 ಮೀಟರ್
ಚೀನೆಚೆರಮ್ ನಾಮ್ಡೀ (ನೈಜೀರಿಯ)- 75.27 ಮೀಟರ್






