ಕಾಂಗೋ ಗೋಲ್ಕೀಪರ್ ಎಂಪಾಸಿ ಪ್ರಯತ್ನ ವ್ಯರ್ಥ: ಕೊಲಂಬಿಯಾ ಗೆ 1-0 ಅಂತರದ ಗೆಲುವು

Photo Credit : X
ಗ್ವಾಡಲಜಾರಾ ಮೆಕ್ಸಿಕೋ: ಕೆ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಕೊಲಂಬಿಯಾ ತಂಡವು ಡಿಆರ್ ಕಾಂಗೋ ವಿರುದ್ಧ 1-0 ಅಂತರದ ಜಯ ಸಾಧಿಸಿ ನಾಕೌಟ್ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಡಿಆರ್ ಕಾಂಗೋ ತಂಡವು ಉಜ್ಬೇಕಿಸ್ತಾನ್ ತಂಡದ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಡಿದ ಕೊಲಂಬಿಯಾ ತಂಡವು ಗೆಲುವ ನೀಡಿದ ಏಕೈಕ ಗೋಲಿಗಾಗಿ ಸಾಕಷ್ಟು ಶ್ರಮಪಡಬೇಕಾಯಿತು. ಡಿಆರ್ ಕಾಂಗೋ ತಂಡದ ಗೋಲ್ಕೀಪರ್ ಲಿಯೋನೆಲ್ ಎಂಪಾಸಿ ಅಕ್ಷರಶಃ ಕೋಟೆಯಂತೆ ನಿಂತು ಹಲವು ಗೋಲು ಪ್ರಯತ್ನಗಳನ್ನು ತಡೆದರು.
ಪಂದ್ಯ ಮುಗಿಯಲು ಇನ್ನು 14 ನಿಮಿಷಗಳು ಬಾಕಿ ಇರುವಾಗ ಡೇನಿಯಲ್ ಮುನಿಯೋಝ್ ಹೊಡೆದ ಚೆಂಡು ಬೇರೆಡೆಗೆ ತಿರುಗಿ ಎಂಪಾಸಿ ಅವರನ್ನು ವಂಚಿಸಿ ಗೋಲು ಪೆಟ್ಟಿಗೆ ಸೇರಿತು. ಇದರಿಂದ ಎಂಪಾಸಿ ನಡೆಸಿದ ಹೋರಾಟವು ಪಂದ್ಯವನ್ನು ಕಾಂಗೊ ಪರವಾಗಿ ಉಳಿಸಿಕೊಳ್ಳಲು ನೆರವಾಗಲಿಲ್ಲ.
ಈ ಪಂದ್ಯದಲ್ಲಿ ಕೊಲಂಬಿಯಾ 9 ನೇರ ಗುರಿಯೊಂದಿಗೆ 20 ಬಾರಿ ಗೋಲು ಪ್ರಯತ್ನ ನಡೆಸಿದರೆ , ಕಾಂಗೊ ತಂಡವು 1 ನೇರ ಪ್ರಯತ್ನದೊಂದಿಗೆ 7 ಬಾರಿ ಗೋಲು ಪ್ರಯತ್ನ ನಡೆಸಿತು.




