ಕೂಚ್ ಬೆಹಾರ್ ಟ್ರೋಫಿ | ಉತ್ತರಾಖಂಡದ ವಿರುದ್ಧ ಕರ್ನಾಟಕ 235 ರನ್ ಗೆ ಆಲೌಟ್

ಈಸಾ ಹಕೀಂ ಪುತ್ತಿಗೆ
ಆಲೂರು, ನ.17: ಕೂಚ್ ಬೆಹಾರ್ ಟ್ರೋಫಿ ಅಂಡರ್-19 ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಕ್ರಿಕೆಟ್ ತಂಡ ಉತ್ತರಾಖಂಡ ತಂಡದ ವಿರುದ್ಧ ತನ್ನ ಮೊದಲ ಇನಿಂಗ್ಸ್ ನಲ್ಲಿ 235 ರನ್ ಗಳಿಸಿ ಆಲೌಟಾಗಿದೆ. 33 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ರವಿವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿರುವ ಕರ್ನಾಟಕ ತಂಡವು ಮಧ್ಯಮ ವೇಗಿ ಈಸಾ ಹಕೀಂ ಪುತ್ತಿಗೆ(3-34)ಹಾಗೂ ಎಡಗೈ ಸ್ಪಿನ್ನರ್ ರಥನ್ ಬಿ.ಆರ್.(3-37)ಅಮೋಘ ಬೌಲಿಂಗ್ ನೆರವಿನಿಂದ ಉತ್ತರಾಖಂಡ ತಂಡವನ್ನು 81.2 ಓವರ್ ಗಳಲ್ಲಿ 202 ರನ್ ಗೆ ನಿಯಂತ್ರಿಸಿತು.
ಸೋಮವಾರ 1 ವಿಕೆಟ್ ನಷ್ಟಕ್ಕೆ 16 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ತಂಡವು ರೋಹಿತ್ ಶತಕದ(101 ರನ್, 204 ಎಸೆತ, 11 ಬೌಂಡರಿ)ಹೊರತಾಗಿಯೂ 90 ಓವರ್ ಗಳಲ್ಲಿ 235 ರನ್ ಗಳಿಸಿ ಆಲೌಟಾಯಿತು.
ವೈಭವ್ ಶರ್ಮಾ 45 ರನ್, ನಾಯಕ ಮಣಿಕಾಂತ ಶಿವಾನಂದ 24 ರನ್ ಹಾಗೂ ವಿಕೆಟ್ ಕೀಪರ್ ರೆಹಾನ್ ಮುಹಮ್ಮದ್ 11 ರನ್ ಗಳಿಸಿದರು. ಉತ್ತರಾಖಂಡದ ಪರ ಪ್ರಿಯಾಂಶ್ ಸಿಂಗ್(3-44)ಯಶಸ್ವಿ ಪ್ರದರ್ಶನ ನೀಡಿದರು.





