ಕೊಪಾ ಅಮೆರಿಕ | ವಿಭಿನ್ನವಾಗಿ ಪ್ರಶಸ್ತಿ ಸ್ವೀಕರಿಸಿದ ಮೆಸ್ಸಿ

PC : PTI
ಫ್ಲೋರಿಡಾ : ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತವು ಜಯಶಾಲಿಯಾದ ನಂತರ ರೋಹಿತ್ ಶರ್ಮಾ ಅವರು ನಿಧಾನವಾಗಿ ನಡೆಯುತ್ತಾ ಟ್ರೋಫಿ ಸ್ವೀಕರಿಸಿದ ವೀಡಿಯೊ ಭಾರೀ ವೈರಲ್ ಆಗಿತ್ತು. ಈ ವಿಶಿಷ್ಟ ನಡಿಗೆಯು ಪುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿಯನ್ನು ನೆನಪಿಸಿತ್ತು. 2022ರಲ್ಲಿ ಖತರ್ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್ನಲ್ಲಿ ತನ್ನ ನೇತೃತ್ವದಲ್ಲಿ ಅರ್ಜೆಂಟೀನ ತಂಡ ಚಾಂಪಿಯನ್ ಆದಾಗ ನಿಧಾನ ನಡಿಗೆಯ ಮೂಲಕ ಮೆಸ್ಸಿ ಸಂಭ್ರಮಿಸಿದ್ದು ಭಾರೀ ಸುದ್ದಿಯಾಗಿತ್ತು.
ಅರ್ಜೆಂಟೀನ ತಂಡ ದಾಖಲೆಯ 16ನೇ ಕೊಪಾ ಅಮೆರಿಕ ಪ್ರಶಸ್ತಿ ಜಯಿಸಿದ ನಂತರ ಮೆಸ್ಸಿ ಮತ್ತೊಮ್ಮೆ ನಿಧಾನಗತಿಯ ನಡಿಗೆಯ ಮೂಲಕ ಸಂಭ್ರಮಿಸಿ ಅಭಿಮಾನಿಗಳನ್ನು ರಂಜಿಸಿದರು.
Messi is the first player ever at an international tournament to be top scorer, top assist provider, win the golden ball, and win the championship. pic.twitter.com/xrhAnu18Rx
— Benji (@awayfrom2_3_4) July 11, 2021
#CopaAmericaFinal The moment Lionel Messi realised his side are the champions. ️ #CopaAmericapic.twitter.com/WfE3XhTboN
— The Field (@thefield_in) July 11, 2021
Messi’s family couldn’t be in Brazil due to COVID-19 restrictions, but that didn’t stop him from sharing this moment with them (: @CopaAmerica)pic.twitter.com/W71KNzjEuc
— B/R Football (@brfootball) July 11, 2021
ಟಿ 20 ವಿಶ್ವಕಪ್ ಟ್ರೋಫಿ ಸ್ವೀಕಾರದ ಕ್ಷಣವನ್ನು ಸ್ಮರಣೀಯವಾಗಿಸಿಕೊಳ್ಳಲು ಈ ರೀತಿಯ ವಿಶಿಷ್ಟ ನಡಿಗೆಗೆ ಸ್ಪಿನ್ನರ್ಗಳಾದ ಯಜುವೇಂದ್ರ ಚಹಾಲ್ ಹಾಗೂ ಕುಲದೀಪ್ ಯಾದವ್ ಸಲಹೆ ನೀಡಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಂವಹನ ನಡೆಸುವಾಗ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದರು.