ಇಂಗ್ಲೆಂಡ್ನ ಮಾಜಿ ಅಗ್ರ ರ್ಯಾಂಕಿನ ಟಿ-20 ಬ್ಯಾಟರ್ ಡೇವಿಡ್ ಮಲನ್ ಕ್ರಿಕೆಟಿಗೆ ವಿದಾಯ

ಡೇವಿಡ್ ಮಲನ್ | PC : PTI
ಲಂಡನ್: ಇಂಗ್ಲೆಂಡ್ನ ಮಾಜಿ ಅಗ್ರ ರ್ಯಾಂಕಿನ ಟಿ-20 ಬ್ಯಾಟರ್ ಡೇವಿಡ್ ಮಲನ್ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪ್ರಕಟಿಸಿದ್ದಾರೆ.
ಬಿಳಿ ಚೆಂಡಿನ ಕ್ರಿಕೆಟ್ನಲ್ಲಿ ತನ್ನ ಯಶಸ್ಸು ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಆದರೆ, ಟೆಸ್ಟ್ ಕ್ರಿಕೆಟ್ನ ತೀವ್ರತೆಯನ್ನು ನಿಭಾಯಿಸಲು ಅಸಮರ್ಥನಾಗಿ ನಿರಾಶೆಗೊಂಡಿರುವೆ ಎಂದು ದಿ ಟೈಮ್ಸ್ ಆಫ್ ಲಂಡನ್ಗೆ 36ರ ಹರೆಯದ ಮಲನ್ ಹೇಳಿದ್ದಾರೆ.
ಮಲನ್ ಅವರು ಇಂಗ್ಲೆಂಡ್ ಪರವಾಗಿ 22 ಟೆಸ್ಟ್, 30 ಏಕದಿನ ಹಾಗೂ 62 ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟಿ-20 ಕ್ರಿಕೆಟ್ನಲ್ಲಿ ಗಮನಾರ್ಹ ಯಶಸ್ಸು ಸಾಧಿಸಿರುವ ಮಲನ್ 2020ರಲ್ಲಿ ನಂ.1 ರ್ಯಾಂಕಿನ ಆಟಗಾರನಾಗಿದ್ದರು. 2022ರಲ್ಲಿ ಟಿ20 ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ಸದಸ್ಯರಾಗಿದ್ದರು.
ಕಳೆದ ವರ್ಷ ನಡೆದಿರುವ 50 ಓವರ್ ವಿಶ್ವಕಪ್ ನಂತರ ಇಂಗ್ಲೆಂಡ್ ಪರ ಮಲನ್ ಆಡಿಲ್ಲ. ಮುಂಬರುವ ಆಸ್ಟ್ರೇಲಿಯ ವಿರುದ್ಧದ ಸೀಮಿತ ಓವರ್ ಕ್ರಿಕೆಟ್ ಪಂದ್ಯಕ್ಕೆ ಆಯ್ಕೆ ಮಾಡಿರುವ ಇಂಗ್ಲೆಂಡ್ ತಂಡದಿಂದ ಹೊರಗುಳಿದಿದ್ದರು.
ನಾನು ಎಲ್ಲ ಮೂರು ಪ್ರಕಾರದ ಕ್ರಿಕೆಟ್ಗಳನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದೆ. ಆದರೆ, ಟೆಸ್ಟ್ ಕ್ರಿಕೆಟ್ನ ತೀವ್ರತೆ ಭಿನ್ನವಾಗಿರುತ್ತದೆ ಎಂದು ಮಲನ್ ಹೇಳಿದ್ದಾರೆ.





