ಡೇವಿಸ್ ಕಪ್: ಟೋಗೊ ವಿರುದ್ಧ ಭಾರತಕ್ಕೆ 2-0 ಮುನ್ನಡೆ
ಮುಕುಂದ್, ರಾಮ್ಕುಮಾರ್ಗೆ ಗೆಲುವು

PC : PTI
ಹೊಸದಿಲ್ಲಿ: ಡೇವಿಸ್ ಕಪ್ ವರ್ಲ್ಡ್ ಗ್ರೂಪ್-1 ಪ್ಲೇ ಆಫ್ ಪಂದ್ಯದಲ್ಲಿ ಟೋಗೊ ವಿರುದ್ಧ 2-0 ಅಂತರದಿಂದ ಮುನ್ನಡೆ ಸಾಧಿಸಿರುವ ಭಾರತ ತಂಡವು ಶುಭಾರಂಭ ಮಾಡಿದೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಸ್.ಮುಕುಂದ್ ಹಾಗೂ ರಾಮ್ಕುಮಾರ್ ರಾಮನಾಥನ್ ಜಯ ಸಾಧಿಸಿ ಆತಿಥೇಯರಿಗೆ ಮುನ್ನಡೆ ಒದಗಿಸಿದರು.
ಶನಿವಾರ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಮುಕುಂದ್ ಟೋಗೊ ತಂಡದ ಲಿಯೊವಾ ಅಜಾವನ್ರನ್ನು 6-2, 6-1 ಸೆಟ್ಗಳ ಅಂತರದಿಂದ ಮಣಿಸಿದರು. ಕೇವಲ 50 ನಿಮಿಷಗಳಲ್ಲಿ ಕೊನೆಗೊಂಡ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ರಾಮ್ಕುಮಾರ್ ಅವರು ಥಾಮಸ್ ಸ್ಟೆಟೊಡ್ಜಿ ಅವರನ್ನು 6-0, 6-2 ಸೆಟ್ಗಳ ಅಂತರದಿಂದ ಸೋಲಿಸಿದರು.
2023ರಲ್ಲಿ ಲಕ್ನೊದಲ್ಲಿ ಮೊರೊಕ್ಕೊ ವಿರುದ್ಧ ತನ್ನ ಚೊಚ್ಚಲ ಪಂದ್ಯ ಆಡಿದ ನಂತರ ಮುಕುಂದ್ ಅವರು ಡೇವಿಸ್ ಕಪ್ನಲ್ಲಿ 2ನೇ ಪಂದ್ಯ ಆಡಿದರು.
ಡಬಲ್ಸ್ ಹಾಗೂ ರಿವರ್ಸ್ ಸಿಂಗಲ್ಸ್ ಪಂದ್ಯಗಳನ್ನು ರವಿವಾರ ಆಡಲಾಗುತ್ತದೆ.
Next Story





