ಎರಡನೇ ಟೆಸ್ಟ್ ಶತಕ ದಾಖಲಿಸಿದ ಧ್ರುವ ಜುರೆಲ್

ಧ್ರುವ ಜುರೆಲ್ | Photo Credit : PTI
ಕೊಲಂಬೊ: ಶ್ರೀಲಂಕಾ ತಂಡದ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನವಾದ ಸೋಮವಾರ ಧ್ರುವ ಜುರೆಲ್ ತನ್ನ ಎರಡನೇ ಟೆಸ್ಟ್ ಶತಕ ಸಿಡಿಸಿದರು.
ಜುರೆಲ್ 171 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ ಮೂರಂಕೆಯನ್ನು ತಲುಪಿದರು.
ಮಳೆಯಿಂದಾಗಿ ಒಂದು ಗಂಟೆಗೂ ಅಧಿಕ ಸಮಯ ಪಂದ್ಯ ಸ್ಥಗಿತಗೊಂಡಿದ್ದಾಗ ಜುರೆಲ್ 95 ರನ್ ಗಳಿಸಿದ್ದರು. ಪಂದ್ಯವು ಪುನರಾರಂಭಗೊಂಡ ನಂತರ ಬೇಗನೆ ಐದು ರನ್ ಕಲೆ ಹಾಕಿದ ಜುರೆಲ್ ಮೈಲಿಗಲ್ಲು ತಲುಪಿದರು.
ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಜುರೆಲ್ ಶ್ರೀಲಂಕಾದಲ್ಲಿ ಭಾರತದ ಪರ ಏಳನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್ ಆಗಿದ್ದಾರೆ. ಈ ಹಿಂದೆ ಹಾರ್ದಿಕ್ ಪಾಂಡ್ಯ ಈ ಸಾಧನೆ ಮಾಡಿದ್ದರು.
ಜುರೆಲ್ 2025ರ ಅಕ್ಟೋಬರ್ನಲ್ಲಿ ಅಹ್ಮದಾಬಾದ್ನಲ್ಲಿ ನಡೆದಿದ್ದ ವೆಸ್ಟ್ಇಂಡೀಸ್ ತಂಡದ ವಿರುದ್ಧ ಪಂದ್ಯದಲ್ಲಿ ತನ್ನ ಚೊಚ್ಚಲ ಟೆಸ್ಟ್ ಶತಕ ಗಳಿಸಿದ್ದರು.
Next Story




