ಶಾಂಘೈ ಮಾಸ್ಟರ್ಸ್: ಸೆಮಿಫೈನಲ್ ನಲ್ಲಿ ಹೊರಬಿದ್ದ ಜೊಕೊವಿಕ್

Photo : AFP
ಶಾಂಘೈ, ಅ. 11: ಕಾಯಿಲೆಪೀಡಿತ ನೊವಾಕ್ ಜೊಕೊವಿಕ್ ಶಾಂಘೈ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ನಲ್ಲಿ, ಅವರನ್ನು ಮೊನಾಕೊದ 204 ವಿಶ್ವ ರ್ಯಾಂಕಿಂಗ್ ನ ವೇಲೆಂಟಿನ್ ವಚರೊಟ್ 6-3, 6-4 ಸೆಟ್ಗಳಿಂದ ಪರಾಭವಗೊಳಿಸಿದರು.
ಈ ಮೂಲಕ, 26 ವರ್ಷದ ಮೊನಾಕೊ ಆಟಗಾರ ಶಾಂಘೈಯಲ್ಲಿ ಐದನೇ ಬಾರಿಗೆ ಪ್ರಶಸ್ತಿ ಗೆದ್ದು ದಾಖಲೆಯನ್ನು ವಿಸ್ತರಿಸುವ ಸರ್ಬಿಯದ ಆಟಗಾರನ ಆಶೆಗೆ ತಣ್ಣೀರೆರಚಿದರು.
ಅಸ್ವಸ್ಥಗೊಂಡಿರುವ ಜೊಕೊವಿಕ್ ಹಲವು ಬಾರಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆದರು. ಆದರೂ ಎರಡು ಸೆಟ್ ಆಡುವಲ್ಲಿ ಯಶಸ್ವಿಯಾದರು.
Next Story





