Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಸವಾಲುಗಳನ್ನೇ ಸ್ಫೂರ್ತಿಯಾಗಿ ಸ್ವೀಕರಿಸುವ...

ಸವಾಲುಗಳನ್ನೇ ಸ್ಫೂರ್ತಿಯಾಗಿ ಸ್ವೀಕರಿಸುವ ಜೊಕೊವಿಕ್

ಹರೀಶ್ ಗಂಗಾಧರ್ಹರೀಶ್ ಗಂಗಾಧರ್13 Sept 2023 11:53 AM IST
share
ಸವಾಲುಗಳನ್ನೇ ಸ್ಫೂರ್ತಿಯಾಗಿ ಸ್ವೀಕರಿಸುವ ಜೊಕೊವಿಕ್
ಇಪ್ಪತ್ತರ ಹರೆಯದ ತರುಣ ಕಾರ್ಲೊಸ್ ಅಲ್ಕರಾಝ್ ಎದುರು ಈ ವರ್ಷ ಜೊಕೊವಿಕ್ ಪರಾಭವಗೂಂಡಾಗ, ಕೆಲವು ಮಾಧ್ಯಮದವರು, ಮಾಜಿ ಆಟಗಾರರು ಜೊಕೊವಿಕ್ ಟೆನಿಸ್ ವೃತ್ತಿ ಜೀವನ ಬಹುಬೇಗ ಅಂತ್ಯವಾಗಲಿದೆ ಎಂಬ ಭವಿಷ್ಯ ನುಡಿದಿದ್ದರು. ಅಂದು ಯಾವುದೇ ಪ್ರತಿಕ್ರಿಯೆ ನೀಡದ ಜೊಕೊವಿಕ್ 24ನೇ ಗ್ರ್ಯಾನ್‌ಸ್ಲಾಮ್ ಗೆಲ್ಲುವ ಮೂಲಕ ಅವರೆಲ್ಲರ ಬಾಯಿ ಮುಚ್ಚಿಸಿದ್ದಾರೆೆ.

ಹರೀಶ್ ಗಂಗಾಧರ್

ಕ್ರೋಯೇಶಿಯದ ಗೊರಾನ್ ಇವನಿಸಿವಿಚ್ ತನ್ನ ಟೆನಿಸ್ ಜೀವನದಲ್ಲಿ ಗೆದ್ದದ್ದು ಏಕೈಕ ಗ್ರ್ಯಾನ್ ಸ್ಲಾಮ್ ಮಾತ್ರ. 2001ರ ವಿಂಬಲ್ಡನ್ ಅದು. ವಿಶ್ವ ಅರ್ಹತಾ ಪಟ್ಟಿಯಲ್ಲಿ 125 ಕ್ರಮಾಂಕದಲ್ಲಿದ್ದ ಆತನಿಗೆ ಆ ವರ್ಷ ವಿಂಬಲ್ಡನ್ ವೈಲ್ಡ್ ಕಾರ್ಡ್ ಪ್ರವೇಶ ನೀಡಿತ್ತು. ಗೊರಾನ್ ಈಗ ಬಹುಶಃ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟು ನೊವಾಕ್ ಜೊಕೊವಿಕ್‌ನ ಗುರು ಮತ್ತು ತರಬೇತುದಾರ.

ಶಕ್ತಿಯುತ ಎಡಗೈ ಸರ್ವ್ ಮಾಡುತ್ತಿದ್ದ ಗೊರಾನ್, ಪೀಟ್ ಸಾಂಪ್ರಸ್, ಆ್ಯಂಡ್ರೆ ಅಗಾಸಿ, ಸ್ಟೆಫಾನ್ ಎಡ್ಬರ್ಗ್, ಈವನ್ ಲಿಂಡೆಲ್ ಮತ್ತು ಬೊರಿಸ್ ಬೆಕರ್ ಕಾಲದಲ್ಲಿ ಆಡಿದವರು. ಇಂತಹ ಬಲಿಷ್ಠ ನುರಿತ ಆಟಗಾರರ ನಡುವೆ ಪುಟ್ಟ ದೇಶದ ಗೊರಾನ್ ತನ್ನ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಹೆಣಗಾಡಿದರು. ಛಲ ಬಿಡದೆ ಕೊನೆಗೂ ವಿಂಬಲ್ಡನ್ ಗರಿ ಮುಡಿಗೇರಿಸಿಕೊಂಡರು. ಸತತ ವಿಫಲತೆಯನ್ನು ಅರಗಿಸಿಕೊಂಡು ಬೂದಿಯಿಂದೆದ್ದ ಫೀನಿಕ್ಸ್ ಕತೆ ಗೊರಾನ್‌ರದ್ದು. ನಿಸ್ಸಂದೇಹವಾಗಿ ಗೊರಾನ್ ತನ್ನ ಛಲವನ್ನೇ ಜೊಕೊವಿಕ್‌ಗೆ ಧಾರೆಯೆರೆದಿದ್ದಾರೆ.

ಇಪ್ಪತ್ತರ ಹರೆಯದ ತರುಣ ಕಾರ್ಲೊಸ್ ಅಲ್ಕರಾಝ್ ಎದುರು ಈ ವರ್ ಜೊಕೊವಿಕ್ ಪರಾಭವಗೂಂಡಾಗ, ಸಾಕಷ್ಟು ಮಾಧ್ಯಮದವರು, ಮಾಜಿ ಆಟಗಾರರು ಜೊಕೊವಿಕ್ ಟೆನಿಸ್ ವೃತ್ತಿ ಜೀವನ ಬಹುಬೇಗ ಅಂತ್ಯವಾಗಲಿದೆ ಎಂಬ ಭವಿಷ್ಯ ನುಡಿದಿದ್ದರು. ಅಂದು ಯಾವುದೇ ಪ್ರತಿಕ್ರಿಯೆ ನೀಡದ ಜೊಕೊವಿಕ್ 24ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಮೂಲಕ ಅವರೆಲ್ಲರ ಬಾಯಿ ಮುಚ್ಚಿಸಿದ್ದಾರೆ.

ಸೆಪ್ಟಂಬರ್ 8, 1973. ಟೆನಿಸ್ ಅಭಿಮಾನಿಗಳು ನೆನಪಿನಲ್ಲಿಡುವ ದಿನ. ಅಂದು ಮಾರ್ಗರೆಟ್ ಕೋರ್ಟ್ ಯುಎಸ್ ಓಪನ್ ಗೆಲ್ಲುವ ಮೂಲಕ 24 ಗ್ರ್ಯಾನ್ ಸ್ಲಾಮ್ ಗೆದ್ದ ಸಾಧನೆ ಮಾಡಿದರು. ಕಳೆದೈವತ್ತು ವರ್ಷಗಳಲ್ಲಿ ಈ ಮೇರು ಸಾಧನೆಯ ಆಸುಪಾಸು ಸ್ಟೆಫಿ ಗ್ರಾಫ್, ಮಾರ್ಟಿನಾ ನವ್ರಾಟಿಲೋವಾ, ಸೆರೆನಾ ವಿಲಿಯಮ್ಸ್, ಫೆಡರರ್, ನಡಾಲ್ ಸುಳಿದಾಡಿದರು. ದಾಖಲೆಯನ್ನು ಸರಿಗಟ್ಟಿದ್ದು ಜೊಕೊವಿಕ್ ಮಾತ್ರ.

ಪ್ರಶಸ್ತಿ ಸಮಾರಂಭದ ನಂತರದ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತನೊಬ್ಬ 25ನೇ ಗ್ರ್ಯಾನ್ ಸ್ಲಾಮ್ ಗೆದ್ದ ನಂತರ ಜೊಕೊವಿಕ್ ನಿವೃತ್ತಿ ಘೋಷಿಸುವರೇ? ಎಂಬ ಪ್ರಶ್ನೆಗೆ ಗೊರಾನ್ ನೀಡಿದ ಉತ್ತರ ಹೀಗಿತ್ತು: 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಆಡಲು ಜೊಕೊವಿಕ್ ತಯಾರಿ ನಡೆಸುತ್ತಿದ್ದಾರೆ.

ಜೊಕೊವಿಕ್ ಅಪ್ರತಿಮ ಸಾಧನೆಗೆ ಕಾರಣಗಳೇನು, ಆತನ ವರ್ಕ್ ಎಥಿಕ್ಸ್ ಹೇಗಿದೆ ಎಂಬ ಕುತೂಹಲ ಹುಟ್ಟಿ ಆತನೇ ಬರೆದ ಪುಸ್ತಕ ‘Serve to Win’ ಓದಿದ್ದೆ. ‘‘ನಾನು ದಿನದಲ್ಲಿ ಹದಿನಾರು ಗಂಟೆ ಎಚ್ಚರವಿರುತ್ತೇನೆ. ಅದರಲ್ಲಿ ಹದಿನಾಲ್ಕು ಗಂಟೆ ಟೆನಿಸ್ ಆಡುವುದಕ್ಕೆ, ಟೆನಿಸ್ ಆಡಲು ತರಬೇತಿ ಪಡೆಯುವುದಕ್ಕೆ ಮತ್ತು ಟೆನಿಸ್ ಆಡಲು ಬೇಕಾದ ಉತ್ತಮ ಆಹಾರ ಸೇವಿಸುವುದಕ್ಕೆ ಬಳಸುತ್ತೇನೆ. ವರ್ಷದಲ್ಲಿ ಹನ್ನೊಂದು ತಿಂಗಳು ಈ ವೇಳಾಪಟ್ಟಿಯನ್ನೇ ನಾನು ಪಾಲಿಸುವುದು ಎನ್ನುತ್ತಾರೆ ಜೊಕೊವಿಕ್! ತದೇಕಚಿತ್ತವೆಂದರೆ ಇದೇ ಇರಬೇಕು.

ಮನೋಮಗ್ನತೆ, ಹೊಸತನ್ನು ಅಪ್ಪಿಕೊಳ್ಳುವ, ಸದಾ ಆಮೂಲಾಗ್ರ ಬದಲಾವಣೆಗೆ ಅಳುಕದ ಮುಕ್ತ ಮನಸ್ಸಿರುವ, ಝೆನ್ ಫಿಲಾಸಫಿ ನಂಬುವ, ಕಠಿಣ ತರಬೇತಿಗೆ, ಸವಾಲುಗಳಿಗೆ ಸದಾ ಸಿದ್ಧನಿರುವ, ನಿಖರವಾದ ಪೂರ್ವಸಿದ್ಧತೆ ತಪ್ಪಿಸದ, ಗುರಿ ಸಾಧನಗೆ ತಯಾರಾದ ದಿನಚರಿಗೆ ಅಂಟಿ ನಡೆಯುವ, ಟೊಂಕ ಕಟ್ಟಿ ನಿಂತ ನೆಚ್ಚಿನ ಗೆಳೆಯರ ಬೆಂಬಲದಲ್ಲಿ ಅರಳುವ, ಕೌಟುಂಬಿಕ ಜೀವನ, ಗುರು ಹಿರಿಯರಲ್ಲಿನ ಗೌರವ ಮತ್ತು ಅಪಾರ ಶಿಸ್ತನ್ನು ಮೈಗೂಡಿಸಿಕೊಂಡಿರುವ ಜೊಕೊವಿಕ್, ಸಾಧನೆಯ ಕನಸು ಕಾಣುವವರಿಗೆಲ್ಲಾ ಪರ್ಫೆಕ್ಟ್ ರೋಲ್ ಮಾಡೆಲ್.

ಜೊಕೊವಿಕ್ ಟೆನಿಸ್ ರಾಕೆಟ್ ಹಿಡಿದದ್ದು ನಾಲ್ಕನೇ ವಯಸ್ಸಿಗೆ. ತಂದೆ ತಂದುಕೊಟ್ಟ ಆಟಿಕೆ ಅದಾಗಿತ್ತು. ಗಂಟೆಗಟ್ಟಲೆ ಬಾಲ್ ಅನ್ನು ಗೋಡೆಗೆ ಹೊಡೆಯುತ್ತಾ ಮನೆಗೆ ಬಾರದ ಪೋರನಾದ. ಅಷ್ಟರಲ್ಲಿ ಆಕಾಶವೇ ಕುಸಿದುಬೀಳುವುದರಲ್ಲಿತ್ತು. ನೇಟೋ ಪಡೆ ಸರ್ಬಿಯಾ ಮೇಲೆ ದಾಳಿ ಮಾಡಿದ್ದವು. ಬೆಲ್ಗ್ರೇಡ್ ನಗರದ ಆಗಸದಿಂದ ಬಾಂಬುಗಳ ಸುರಿಮಳೆಯಾಗತೊಡಗಿತು. ಜೊಕೊವಿಕ್ ಕುಟುಂಬ ನೆಲಮಾಳಿಗೆಗಳಲ್ಲಿ ಜೀವನ ಕಳೆಯಬೇಕಾಯಿತು. ಜೊಕೊವಿಕ್‌ರ ಊರು ನಶಿಸಿಹೋದ ಭೂತನಗರಿಯಂತಾಗಿತ್ತು. ಸಾವಿರಾರು ಜನರು ಬಲಿಯಾಗಿದ್ದರು. ಬಲಿಷ್ಠ ರಾಷ್ಟ್ರಗಳು ಹೇರಿದ ದಿಗ್ಬಂಧನದಿಂದ ಮೂರು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಆ ದಿನಗಳಲ್ಲೂ ಟೆನಿಸ್ ತಾರೆಯಾಗುವ ಜೊಕೊವಿಕ್ ಕನಸುಗಳು ಕಮರದಂತೆ ಎಚ್ಚರವಹಿಸಿದವರು ತಂದೆ ತಾಯಿ. ಜೊಕೊವಿಕ್ ಕೂಡ ತನ್ನ ಕನಸುಗಳನ್ನು ಸಾಯಲು ಬಿಡಲಿಲ್ಲ. ಕೆಟ್ಟ ಟೆನಿಸ್ ಕೋರ್ಟ್‌ಗಳಲ್ಲಿ ಆಡಿದ, ಖಾಲಿ ಈಜುಕೊಳದಲ್ಲಿ ಆಡಿದ, ಎದುರಾಳಿ ಆಟಗಾರ ಇಲ್ಲವಾದಾಗ ಗೋಡೆಗಳಿಗೆ ಚಂಡು ಹೊಡೆದ! ಟೆನಿಸ್ ಅವನ ಉಸಿರಾಗಿತ್ತು.

ತಾಯಿಯನ್ನು ಜೊಕೊವಿಕ್ ‘ಸೂಪರ್ ವುಮನ್’ ಅಂತಲೇ ಇಂದಿಗೂ ಕರೆಯುವುದು. ಸಂಕಷ್ಟದ ಪರಿಸ್ಥಿತಿಯಲ್ಲಿ ಮನೆಯ ಜವಾಬ್ದಾರಿಯ ಜೊತೆಗೆ ಮಗನ ಕನಸುಗಳಿಗೆ ಹೆಗಲು ಕೊಟ್ಟು ನಿಂತವಳು ಅವರೇ. ಜೊಕೊವಿಕ್ ಕಿರಿಯರ ಪಂದ್ಯಾವಳಿಗಳಲ್ಲಿ ಎಲ್ಲರ ಗಮನ ಸೆಳೆದ ದಿನಗಳಿಂದ ಪೋಷಕರಿಗೆ ನಾನಾ ಆಮಿಷವೊಡ್ಡಲಾಯಿತು. ಇಡೀ ಕುಟುಂಬಕ್ಕೆ ಬ್ರಿಟನ್ ಪೌರತ್ವ ನೀಡುತ್ತೇವೆ. ಕೇಳಿದಷ್ಟು ಹಣ ನೀಡುತ್ತೇವೆ. ಯುವ ಜೊಕೊವಿಕ್ ಬ್ರಿಟನ್ ದೇಶಕ್ಕೆ ಆಡಬೇಕು ಎಂದು ಏಜೆಂಟ್‌ಗಳು ಒತ್ತಡ ಹಾಕಿದರು.

ಯುದ್ಧದಿಂದ ನಲುಗಿ ಹೋಗಿದ್ದ ದೇಶ ಸರ್ಬಿಯಾ, ದುಸ್ತರ ಬದುಕು, ಊಟ, ಕಮಾಯಿಗೆಲ್ಲಾ ನಿರಂತರ ಹೋರಾಟ. ನಿರಾಕರಿಸಲಾಗದ ಆಫರ್ ಅದು. ಆದರೂ ಜೊಕೊವಿಕ್ ತಂದೆ- ತಾಯಿ ತೆಗೆದುಕೊಂಡ ನಿರ್ಧಾರ ಅನುಕರಣೀಯ. ನಮ್ಮ ದೇಶ ಸರ್ಬಿಯಾ. ನಮ್ಮ ಸಂಬಂಧಿಕರು, ಗೆಳೆಯರಿರುವುದು ಇಲ್ಲಿ. ನಮ್ಮ ಭಾಷೆ ಮಾತನಾಡುವುದು ಇಲ್ಲಿ. ನಮ್ಮ ಆದಿಯಿಲ್ಲಿ, ಅಂತ್ಯವಿಲ್ಲಿ.. ಸರ್ಬಿಯಾದಲ್ಲಿ ಎಂದು ನಿರ್ಣಯ ಮಾಡಿಬಿಟ್ಟಿದ್ದರು. ಇಂತಹ ಹೋರಾಟದ ಬದುಕಿನ ನಡುವೆ ಜೊಕೊವಿಕ್ ಅಸಾಧ್ಯವಾದುದನ್ನೇ ಸಾಧಿಸಿದ್ದಾರೆ. ವಿಶ್ವದ ನಂಬರ್ ಒನ್ ಆಟಗಾರನಾಗಿದ್ದಾನೆ. ಯಾರು ಕೂಡ ಏನನ್ನೂ ಅಸಾಧ್ಯವೆಂದು ಹೇಳುವ ಹಾಗಿಲ್ಲ ಎನ್ನುತ್ತಾರೆ ಜೊಕೊವಿಕ್.

ಜೊಕೊವಿಕ್ ಹಿರಿಯರ ಟೆನಿಸ್ ಕ್ರೀಡೆಗೆ ಪಾದಾರ್ಪಣೆ ಮಾಡಿದಾಗ ಫೆಡರರ್ ಮತ್ತು ನಡಾಲ್ ಟೆನಿಸ್ ಒಡೆಯರಾಗಿದ್ದರು. ಅವರಿಬ್ಬರೂ ಅವರದೇ ಎಲೈಟ್ ಕ್ಲಾಸಿನಲ್ಲಿದ್ದರು. ಜೊಕೊವಿಕ್ ಅವರಿಬ್ಬರನ್ನು ಕೆಲ ಪಂದ್ಯಗಳಲ್ಲಿ ಸೋಲಿಸಿದ ಆಟಗಾರನಾದರೂ, ಟೆನಿಸ್ ಅಭಿಮಾನಿಗಳು ಜೊಕೊವಿಕ್‌ರನ್ನು ಎರಡನೇ ದರ್ಜೆ ಆಟಗಾರನೆಂದೇ ಪರಿಗಣಿಸಿದ್ದರು. ಪಂದ್ಯಗಳಲ್ಲಿ ಪ್ರೇಕ್ಷಕರ ಬೆಂಬಲ ಫೆಡರರ್ ಮತ್ತು ನಡಾಲ್ ಪರವಾಗಿಯೇ ಇರುತಿತ್ತು. ಜೊಕೊವಿಕ್ ಇಡಿಯ ಕ್ರೀಡಾಂಗಣವನ್ನೇ ಅಲಕ್ಷಿಸಿ ಆಡುವ ವಾತಾವರಣ ಸೃಷ್ಟಿಯಾಗಿತ್ತು. ಫೆಡರರ್-ನಡಾಲ್ ಆಧಿಪತ್ಯಕ್ಕೆ ಸವಾಲೊಡ್ಡುವುದು ಸಣ್ಣ ವಿಚಾರವಾಗಿರಲಿಲ್ಲ.

2008ರಲ್ಲಿ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯನ್ನು ಗೆದ್ದರೂ, ಜನ ಅವರನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡಿರಲಿಲ್ಲ. ಅದೇ ವರ್ಷ ಜೊಕೊವಿಕ್‌ಗೆ ಪಂದ್ಯಗಳ ನಡುವೆ ಅತಿಯಾದ ಹೊಟ್ಟೆನೋವು ಕಾಣಿಸಿಕೊಳ್ಳತೊಡಗಿತ್ತು. ಉಸಿರಾಟ ಕಷ್ಟವಾಗುತ್ತಿತ್ತು. ಪಂದ್ಯದ ನಡುವೆ ಅನುಮತಿ ಕೇಳಿ ಶೌಚಾಲಯದಲ್ಲಿ ಹೊಟ್ಟೆ ಹಿಡಿದು ಅಳುತ್ತಿದ್ದರು ಜೊಕೊವಿಕ್. ಅತೀವ ನೋವಿನಿಂದ ಬಳಲುತ್ತಿದ್ದ ಜೊಕೊವಿಕ್‌ರನ್ನು ನೋಡಿ ಅವನ ಮೇಲೆ ಹುಲಿಯಂತೆ ಮುಗಿಬಿದ್ದು ಬೇಟೆಯಾಡುತ್ತಿದ್ದರು ಅವರ ಎದುರಾಳಿಗಳು. ಹೀಗೆ ಜೊಕೊವಿಕ್ ಕುಗ್ಗಿಹೋದ ಕ್ಷಣದ ಉಪಯೋಗ ಪಡೆದು ಎರಗಿದ ವಿಲ್ಫ್ರೆಡ್ ಸೊಂಗಾ ವಿರುದ್ಧದ ಪಂದ್ಯವನ್ನು ಜೊಕೊವಿಕ್ ಮರೆಯಲಾರರು.

ವೃತ್ತಿ ಜೀವನಕ್ಕೆ ತೆರೆಬಿತ್ತು ಎಂಬ ಅನುಮಾನ ಕಾಡಿದ ದಿನಗಳಲ್ಲಿ ಜೊಕೊವಿಕ್ ನೆರವಿಗೆ ಬಂದದ್ದು ಸರ್ಬಿಯಾದ ವೈದ್ಯ ಡಾ.ಐಗೋರ್ ಸಟೋಜೆವಿಚ್. ದೇಹ ತಪಾಸಣೆ ಮಾಡಿದ ವೈದ್ಯ ಜೊಕೊವಿಕ್ ಗ್ಲುಟೆನ್ ಮತ್ತು ಡೈರಿ ಪದಾರ್ಥಗಳಿಗೆ ಅಲರ್ಜಿಕ್ ಎಂದು ಪತ್ತೆ ಹಚ್ಚಿದ್ದರು! ಅಂದಿನಿಂದ ಜೊಕೊವಿಕ್ ಆಹಾರ ಸೇವನೆಯಲ್ಲಿ ಮಾಡಿಕೊಂಡ ಬದಲಾವಣೆ ಇಂದಿಗೂ ಅವರನ್ನು ಅಷ್ಟು ಫಿಟ್ ಆಗಿಟ್ಟಿದೆ.

2023ರ ಅಮೆರಿಕನ್ ಓಪನ್ ಗೆದ್ದು ಪ್ರಶಸ್ತಿ ತೆಗೆದುಕೊಳ್ಳುವಾಗ ಯಾರೂ ನಿರೀಕ್ಷಿಸದ ಗೌರವ ಸಮರ್ಪಣೆಯೊಂದನ್ನು ತನ್ನ ಗೆಳೆಯನಿಗೆ ಜೊಕೊವಿಕ್ ಅರ್ಪಿಸಿದರು. ಕೋಬೆ ಬ್ರಯಾಂಟ್ ವಿಶ್ವ ಕಂಡ ಶ್ರೇಷ್ಠ ಕ್ರೀಡಾಪಟು. ಆತ ಬಾಸ್ಕೆಟ್ ಬಾಲ್ ಕ್ರೀಡೆಯ ಮುಹಮ್ಮದ್ ಅಲಿ ಎಂದರೆ ತಪ್ಪಾಗಲಾರದು. ಜೊಕೊವಿಕ್ ಮಾನಸಿಕವಾಗಿ ಕುಗ್ಗಿದಾಗ ಸಲಹೆ ನೀಡಿ ಮೇಲಕೆತ್ತಿದ್ದ ಜೀವದ ಗೆಳೆಯ ಕೋಬೆ. ಕೋಬೆ ಬರೆದ ‘ಮಾಂಬಾ ಮೆಂಟಾಲಿಟಿ’ ಕ್ರೀಡಾಪಟುಗಳಿಗೆ ಬೈಬಲ್ ಎಂದರೆ ತಪ್ಪಾಗಲಾರದು. ಆಹಾರ, ಶಿಸ್ತು, ಶ್ರಮ, ತರಬೇತಿ, ಮೈಂಡ್ಸೆಟ್, ದೇಹಾರೈಕೆಯ ಕೈಪಿಡಿಯದು.

2020ರಲ್ಲಿ ಕೋಬೆ ಅನಿರೀಕ್ಷಿತವಾಗಿ ಸಾವಿಗೀಡಾದರು. ಕೋಬೆ ಧರಿಸುತ್ತಿದ್ದ ಜೆರ್ಸಿ ಸಂಖ್ಯೆ 24. ಜೊಕೊವಿಕ್ ಗೆದ್ದ ಗ್ರ್ಯಾನ್ ಸ್ಲಾಮ್ ಸಂಖ್ಯೆ 24. ಕೋಬೆ ಚಿತ್ರವಿದ್ದ, ‘ಮಾಂಬಾ ಮೆಂಟಾಲಿಟಿ’ ಎಂದು ಮುದ್ರಿಸಿದ್ದ ಟೀಶರ್ಟ್ ತೊಟ್ಟು ಜೊಕೊವಿಕ್ ಗೆಳೆಯನಿಗೆ ತೋರಿದ ಗೌರವ ಗ್ರೀಕ್ ಯೋಧ ಅಖಿಲೀಸ್ ಟ್ರಾಯ್ ಯುದ್ಧದಲ್ಲಿ ಪೆಟ್ರೋಕ್ಲೆಸನಿಗೆ ತೋರಿದ ಗೌರವದಂತಿತ್ತು! ಜೊಕೊವಿಕ್ ಗೆಳೆಯರ ಬಳಗದಲ್ಲಿ ಲಿಯೋನೆಲ್ ಮೆಸ್ಸಿ, ರೊನಾಲ್ಡೊ, ನಟ ಮ್ಯಾಥ್ಯೂ ಮೆಕ್ಕನೋಗಿಯಂತಹವರಿದ್ದಾರೆ! ಈ ಮಾನವ ಸಂಬಂಧಗಳೇ ಎಷ್ಟು ಚೆಂದವಲ್ಲವೇ? ‘‘I am because we are. ನಾನು ನಿಮ್ಮೆಲ್ಲರಿಂದ. ಮಾನವೀಯತೆಗಿಂತ ಮಿಗಿಲಾದುದಿಲ್ಲ’’ ಎಂದು ಸಾರಲು ಇದಕ್ಕಿಂತ ಪ್ರಭಾವಿ ಮಾರ್ಗ ನನಗಂತೂ ಹೊಳೆದಿಲ್ಲ.

ಸೋ, ವಾಟ್ ಡ್ರೈವ್ಸ್ ಜೊಕೊವಿಕ್? ಜೊಕೊವಿಕ್ ಕೊಟ್ಟ ಉತ್ತರ-

‘‘ನನ್ನ ನಂತರ ಬರುವವರು, ನಾನು ಏನು ಸಾಧಿಸಿದ್ದೇನೆ, ಹೇಗೆ ಸಾಧಿಸಿದ್ದೇನೆಂಬುದನ್ನು ಒಮ್ಮೆ ನೋಡಲಿ. ನನ್ನ ಸಾಧನೆಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡು, ಅವರೂ ಸಾಧಿಸಲಿ. ನಾನು ಇನ್ನೂ ಹೆಚ್ಚು ಸಾಧಿಸಲು ಇಂದೊಂದೇ ಪ್ರೇರಣೆ ಸಾಕು.’’

ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಅಮೆರಿಕದ ಮೈಕೆಲ್ ಫೆಲ್ಪ್ಸ್ ಗೆದ್ದ 28 ಮೆಡಲ್‌ಗಳ ಸಾಧನೆಯನ್ನು ಭವಿಷ್ಯದಲ್ಲಿ ಯಾರೂ ಸರಿಗಟ್ಟಿ, ಮುರಿಯಲಾರರು. ಅಂಥದೇ ಸಾಧನೆಯನ್ನು ಜೊಕೊವಿಕ್ ಮಾಡಲಿದ್ದಾರೆ ಎಂಬುದು ನನ್ನ ನಂಬಿಕೆ.

share
ಹರೀಶ್ ಗಂಗಾಧರ್
ಹರೀಶ್ ಗಂಗಾಧರ್
Next Story
X