ಎಟಿಪಿ ಫೈನಲ್ಸ್ನಲ್ಲಿ ಜೊಕೊವಿಕ್ ಆಡಲಿದ್ದಾರೆ : ದೃಢಪಡಿಸಿದ ಇಟಲಿ ಟೆನಿಸ್ ಫೆಡರೇಶನ್

Photo: PTI
ಪ್ಯಾರಿಸ್, ನ.4: ಮೂರು ವಾರಗಳಿಂದ ಸಕ್ರಿಯ ಟೆನಿಸ್ನಿಂದ ದೂರ ಉಳಿದಿದ್ದ ಏಳು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಮುಂದಿನ ವಾರ ಟೂರಿನ್ನಲ್ಲಿ ಆರಂಭವಾಗಲಿರುವ ಎಟಿಪಿ ಫೈನಲ್ಸ್ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಇಟಲಿಯ ಟೆನಿಸ್ ಫೆಡರೇಶನ್ ಸೋಮವಾರ ದೃಢಪಡಿಸಿದೆ.
ಅಕ್ಟೋಬರ್ 11ರಂದು ನಡೆದ ಶಾಂಘೈ ಮಾಸ್ಟರ್ಸ್-1000 ಟೂರ್ನಿಯ ಸೆಮಿ ಫೈನಲ್ನಲ್ಲಿ ವಲೆಂಟಿನ್ ವಚೆರೊಟ್ ವಿರುದ್ಧ ಸೋತ ನಂತರ 38ರ ವಯಸ್ಸಿನ ಜೊಕೊವಿಕ್ ರವಿವಾರ ಕೊನೆಗೊಂಡಿರುವ ಪ್ಯಾರಿಸ್ ಮಾಸ್ಟರ್ಸ್ ಟೂರ್ನಿಯಿಂದ ಹೊರಗುಳಿದಿದ್ದರು.
ಅಲೆಜಾಂಡ್ರೊ ಟಬಿಲೊ ವಿರುದ್ಧ 2ನೇ ಸುತ್ತಿನ ಪಂದ್ಯದೊಂದಿಗೆ ಅಥೆನ್ಸ್ ಈ ವಾರ ಸ್ಪರ್ಧಾತ್ಮಕ ಟೆನಿಸ್ಗೆ ಜೊಕೊವಿಕ್ಗೆ ಮರಳಲಿದ್ದಾರೆ.
‘‘ಜೊಕೊವಿಕ್ ಎಟಿಪಿ ಫೈನಲ್ಸ್ನಲ್ಲಿ ಆಡುವುದು ದೃಢಪಟ್ಟಿದೆ’’ಎಂದು ಇಟಲಿ ಟೆನಿಸ್ ಫೆಡರೇಶನ್ ಅಧ್ಯಕ್ಷ ಆಂಜೆಲೊ ಬಿನಾಘಿ ಹೇಳಿದ್ದಾರೆ.
ಎಟಿಪಿ ಫೈನಲ್ಸ್ ಸಾಂಪ್ರದಾಯಿಕವಾಗಿ ವರ್ಷಾಂತ್ಯದಲ್ಲಿ ನಡೆಯಲಿರುವ ಟೂರ್ನಿಯಾಗಿದ್ದು, ಇದರಲ್ಲಿ ವರ್ಷದ ಶ್ರೇಷ್ಠ 8 ಆಟಗಾರರು ಭಾಗವಹಿಸಲಿದ್ದಾರೆ. ಜೊಕೊವಿಕ್ 2007ರಲ್ಲಿ ಮೊದಲ ಬಾರಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸದ್ಯ ಅವರು ಎಟಿಪಿ ರ್ಯಾಂಕಿಂಗ್ನಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಈ ವರ್ಷ ಎಲ್ಲ 4 ಗ್ರ್ಯಾನ್ಸ್ಲಾಮ್ ಟೂರ್ನಿಗಳಲ್ಲಿ ಸೆಮಿ ಫೈನಲ್ಗೆ ತಲುಪಿದ್ದರು. ಮಯಾಮಿ ಓಪನ್ನಲ್ಲೂ ಫೈನಲ್ಗೆ ಪ್ರವೇಶಿಸಿದ್ದರು.







