ಫಿಫಾ ವಿಶ್ವಕಪ್ ಫೈನಲ್ನಲ್ಲಿ ಡೊನಾಲ್ಡ್ ಟ್ರಂಪ್ ಭಾಗಿ : ಶ್ವೇತಭವನ ಮಾಹಿತಿ

ಡೊನಾಲ್ಡ್ ಟ್ರಂಪ್ | Photo Credit : AP
ನ್ಯೂಯಾರ್ಕ್, ಜು.17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ನ್ಯೂಯಾರ್ಕ್ನಲ್ಲಿ ನಡೆಯಲಿರುವ ಅರ್ಜೆಂಟೀನ ಹಾಗೂ ಸ್ಪೇನ್ ನಡುವಿನ 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಗುರುವಾರ ತಿಳಿಸಿದ್ದಾರೆ.
ಫೈನಲ್ ಪಂದ್ಯವು ನ್ಯೂಯಾರ್ಕ್ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿದೆ.
ಕಳೆದ ವರ್ಷದ ಚೆಲ್ಸಿಯ ಹಾಗೂ ಪ್ಯಾರಿಸ್ ಸೇಂಟ್-ಜರ್ಮೈನ್ ತಂಡಗಳ ನಡುವಿನ ಫಿಫಾ ಕ್ಲಬ್ ವಿಶ್ವಕಪ್ ಫೈನಲ್ನಲ್ಲಿ ಟ್ರಂಪ್ ಕೂಡ ಹಾಜರಿದ್ದರು. ಆಗ ಅವರು ಪ್ರೀಮಿಯರ್ ಲೀಗ್ ಕ್ಲಬ್ಗೆ ಟ್ರೋಫಿಯನ್ನು ಪ್ರದಾನಿಸಿದ್ದರು.
‘‘ರವಿವಾರ ನಡೆಯಲಿರುವ ಅಂತಿಮ ಪಂದ್ಯಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಅಧ್ಯಕ್ಷರು ಹಾಜರಾಗಲು ಎದುರು ನೋಡುತ್ತಿದ್ದಾರೆ ಎಂದು ನನಗೆ ತಿಳಿದಿದೆ’’ ಎಂದು ಲೀವಿಟ್ ಪತ್ರಿಕಾಗೋಷ್ಠಿಯಲ್ಲಿ ವರದಿಗಾರರಿಗೆ ತಿಳಿಸಿದರು.
Next Story




