ದುಲೀಪ್ ಟ್ರೋಫಿ | ಸಾರ್ವಕಾಲಿಕ ಶ್ರೇಷ್ಠ ದಾಖಲೆ ಮುರಿದ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ | Photo Credit : PTI
ಬೆಂಗಳೂರು: ತನ್ನ ಬಿರುಸಿನ ಸಾಧನೆಗಳ ಪಟ್ಟಿಗೆ ಮತ್ತೊಂದು ದಾಖಲೆ ಸೇರಿಸಿರುವ ವೈಭವ್ ಸೂರ್ಯವಂಶಿ ದುಲೀಪ್ ಟ್ರೋಫಿ ಇತಿಹಾಸದಲ್ಲಿ ಅರ್ಧಶತಕವನ್ನು ಸಿಡಿಸಿದ ಯುವ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಕೇಂದ್ರ ವಲಯ ವಿರುದ್ಧ ದುಲೀಪ್ ಟ್ರೋಫಿ ಸೆಮಿ ಫೈನಲ್ನಲ್ಲಿ ಪೂರ್ವ ವಲಯದ ಪರ 15ರ ವಯಸ್ಸಿನ ಸೂರ್ಯವಂಶಿ ಈ ಸಾಧನೆ ಮಾಡಿದ್ದಾರೆ. ಸಿಕ್ಸರ್ ಸಿಡಿಸುವ ಮೂಲಕ ಕೇವಲ 42 ಎಸೆತಗಳಲ್ಲಿ ತನ್ನ ಅರ್ಧಶತಕವನ್ನು ಪೂರೈಸಿದ್ದಾರೆ.
81 ಎಸೆತಗಳಲ್ಲಿ 92 ರನ್ ಗಳಿಸಿ ಔಟಾಗಿರುವ ಸೂರ್ಯವಂಶಿ ಕೇವಲ 8 ರನ್ನಿಂದ ಶತಕ ವಂಚಿತರಾದರು.
15 ವರ್ಷ, 175 ದಿನಗಳಲ್ಲಿ ದುಲೀಪ್ ಟ್ರೋಫಿಯ ಸೆಮಿ ಫೈನಲ್ನಲ್ಲಿ 50 ರನ್ ಗಳಿಸಿರುವ ಸೂರ್ಯವಂಶಿ 57 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. 1969ರಲ್ಲಿ ಲಕ್ಷ್ಮಣ್ ಸಿಂಗ್ ಅವರು 16 ವರ್ಷ, 23 ದಿನಗಳಲ್ಲಿ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಆಗಿದ್ದರು.
ಸೂರ್ಯವಂಶಿ ಇದೀಗ ಲಕ್ಷ್ಮಣ್ ಸಿಂಗ್ ಹಾಗೂ ಪಿಯೂಷ್ ಚಾವ್ಲಾ ದಾಖಲೆಯನ್ನು ಮುರಿದಿದ್ದಾರೆ. ಚಾವ್ಲಾ 2005ರಲ್ಲಿ 16 ವರ್ಷ, 307 ದಿನಗಳಲ್ಲಿ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಅರ್ಧಶತಕ ಗಳಿಸಿದ್ದರು.
ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಗಳಿಸಿದ ಯುವ ಆಟಗಾರರು
ವೈಭವ್ ಸೂರ್ಯವಂಶಿ: 15 ವರ್ಷಗಳು, 175 ದಿನಗಳು
ಲಕ್ಷ್ಮಣ್ ಸಿಂಗ್(1969): 16 ವರ್ಷಗಳು, 23 ದಿನಗಳು
ಪಿಯೂಷ್ ಚಾವ್ಲಾ(2025): 16 ವರ್ಷಗಳು, 307 ದಿನಗಳು






