Duleep Trophy | ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರರು ಯಾರು ಗೊತ್ತಾ?

ಇಶಾನ್ ಕಿಶನ್ | Photo Credit : PTI
ಚೆನ್ನೈ, ಸೆ. 7: ಪೂರ್ವ ವಲಯ ಹಾಗೂ ದಕ್ಷಿಣ ವಲಯ ನಡುವೆ ನಡೆಯುತ್ತಿರುವ ದುಲೀಪ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಗಳಿಸಿದ್ದಾರೆ.
ಎಡಗೈ ಬ್ಯಾಟರ್ ಕಿಶನ್ ಎರಡನೇ ದಿನವಾದ ಸೋಮವಾರ ದಕ್ಷಿಣ ವಲಯದ ಬೌಲರ್ ಗಳನ್ನು ಹಿಗ್ಗಾಮುಗ್ಗ ದಂಡಿಸಿ ಕೇವಲ 270 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು.
250 ರನ್ ಗಳಿಸಿದ್ದಾಗ ಗಾಯಗೊಂಡು ನಿವೃತ್ತರಾದ ಕಿಶನ್ ಅಂತಿಮ ಸೆಷನ್ ನಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ಮುಂದುವರಿಸಿ ಇನ್ನೂ 20 ರನ್ ಸೇರಿಸಿದರು.
ದುಲೀಪ್ ಟ್ರೋಫಿ ಟೂರ್ನಿಯಲ್ಲಿ 25 ವರ್ಷಗಳ ಬಳಿಕ ತ್ರಿಶತಕ ಗಳಿಸಿದ ಮೂರನೇ ಆಟಗಾರನಾಗುವ ಅವಕಾಶದಿಂದ ವಂಚಿತರಾದರು. ಈ ಟೂರ್ನಿಯಲ್ಲಿ ರಮನ್ ಲಾಂಬಾ ಹಾಗೂ ಗಗನ್ ಖೋಡಾ ತ್ರಿಶತಕಗಳನ್ನು ಸಿಡಿಸಿದ್ದರು.
ದುಲೀಪ್ ಟ್ರೋಫಿಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಗಳು
ರಮನ್ ಲಾಂಬಾ: 320 — 1987ರಲ್ಲಿ ಉತ್ತರ ವಲಯ–ಪಶ್ಚಿಮ ವಲಯ
ಗಗನ್ ಖೋಡಾ: ಔಟಾಗದೆ 300 — 2001ರಲ್ಲಿ ಕೇಂದ್ರ ವಲಯ–ದಕ್ಷಿಣ ವಲಯ
ಎಸ್.ಎಸ್. ಭಾವೆ: 292 — 1994ರಲ್ಲಿ ಪಶ್ಚಿಮ ವಲಯ–ದಕ್ಷಿಣ ವಲಯ
ಅರುಣ್ ಲಾಲ್: 287 — 1986ರಲ್ಲಿ ಪೂರ್ವ ವಲಯ–ಪಶ್ಚಿಮ ವಲಯ
ಸಂಜಯ್ ಮಾಂಜ್ರೇಕರ್: 278 — 1986ರಲ್ಲಿ ಪಶ್ಚಿಮ ವಲಯ–ಕೇಂದ್ರ ವಲಯ






