ದುಲೀಪ್ ಟ್ರೋಫಿ| ಹ್ಯಾಟ್ರಿಕ್ ಹೀರೊ ಆಕಿಬ್ ನಬಿ

ಆಕಿಬ್ ನಬಿ | PC : X
ಬೆಂಗಳೂರು: ಉತ್ತರ ವಲಯದ ಬೌಲರ್ ಆಕಿಬ್ ನಬಿ(10.1-1-28-5)ದುಲೀಪ್ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೂರ್ವ ವಲಯದ ವಿರುದ್ಧ ಹ್ಯಾಟ್ರಿಕ್ ಸಹಿತ ಐದು ವಿಕೆಟ್ ಗೊಂಚಲು ಪಡೆದು ಮಿಂಚಿದ್ದಾರೆ.
ಜಮ್ಮು-ಕಾಶ್ಮೀರದ 28ರ ಹರೆಯದ ಬೌಲರ್ ನಬಿ ಶುಕ್ರವಾರ 4 ಎಸೆತಗಳಲ್ಲಿ 4 ವಿಕೆಟ್ ಸಹಿತ ಪೂರ್ವ ವಲಯದ ಕೊನೆಯ ಐದು ವಿಕೆಟ್ ಗಳನ್ನು ಬೇಗನೆ ಉರುಳಿಸಿದರು. ಉತ್ತರ ವಲಯಕ್ಕೆ 175 ರನ್ ಮುನ್ನಡೆ ಒದಗಿಸಿಕೊಟ್ಟರು.
ನಬಿ ಅವರು 2024-25ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಒಟ್ಟು 44 ವಿಕೆಟ್ಗಳನ್ನು ಕಬಳಿಸಿ ಜಮ್ಮು-ಕಾಶ್ಮೀರ ತಂಡವು ಕ್ವಾರ್ಟರ್ ಫೈನಲ್ ತಲುಪುವಲ್ಲಿ ಪ್ರಧಾನ ಪಾತ್ರವಹಿಸಿದ್ದರು.
ನಬಿ ಅವರು ಕಪಿಲ್ ದೇವ್(ಉತ್ತರ-ಪಶ್ಚಿಮ ವಲಯ, 1978-79)ಹಾಗೂ ಸಾಯಿರಾಜ್ ಬಹುತುಲೆ(2001ರಲ್ಲಿ ಪಶ್ಚಿಮ-ಪೂರ್ವ ವಲಯ)ನಂತರ ದುಲೀಪ್ ಟ್ರೋಫಿ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟನ್ನು ಪಡೆದ ಮೂರನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.
ಸಿಂಧು ಜೈಸ್ವಾಲ್ ರನ್ನು ಔಟ್ ಮಾಡಿದ ನಬಿ ಅವರು ಸತತ 4 ಎಸೆತಗಳಲ್ಲಿ 4 ವಿಕೆಟ್ಗಳನ್ನು ವಿಕೆಟ್ ಭಾರತದ 4ನೇ ಬೌಲರ್ ಆಗಿದ್ದಾರೆ. ಎಸ್.ಎಸ್. ಸೈನಿ(1988-89,ದಿಲ್ಲಿ-ಹಿಮಾಚಲ), ಮುಹಮ್ಮದ್ ಮುಧಸಿರ್(2018-19, ಜಮ್ಮು-ರಾಜಸ್ಥಾನ), ಕುಲ್ವಂತ್ ಖೆಜ್ರೊಲಿಯ(2023-24, ಮಧ್ಯಪ್ರದೇಶ-ಬರೋಡ) ಈ ಹಿಂದೆ ಈ ಸಾಧನೆ ಮಾಡಿದ್ದಾರೆ.
ಮುಹಮ್ಮದ್ ಶಮಿ ವಿಕೆಟನ್ನು ಪಡೆಯುವ ಮೂಲಕ ನಬಿ ಅವರು ಐದು ವಿಕೆಟ್ ಗೊಂಚಲು ಪೂರೈಸಿದರು.







