ದುಲೀಪ್ ಟ್ರೋಫಿ | ಸ್ಪಿನ್ನರ್ ಗಳಾದ ಕಾರ್ತಿಕೇಯ, ಜೈನ್ ಪ್ರದರ್ಶನ ಶ್ಲಾಘಿಸಿದ ರಜತ್ ಪಾಟಿದಾರ್

ಸಾರಾಂಶ್ ಜೈನ್ | PTI
ಬೆಂಗಳೂರು, ಸೆ.15: ಫೈನಲ್ನಲ್ಲಿ ಮಾತ್ರವಲ್ಲ ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿರುವ ಕೇಂದ್ರ ವಲಯ ತಂಡವನ್ನು 2025-26ರ ದುಲೀಪ್ ಟ್ರೋಫಿ ವಿಜೇತ ನಾಯಕ ರಜತ್ ಪಾಟಿದಾರ್ ಶ್ಲಾಘಿಸಿದರು.
ಫೈನಲ್ ಪಂದ್ಯದಲ್ಲಿ ಒಟ್ಟು 16 ವಿಕೆಟ್ಗಳನ್ನು ಉರುಳಿಸಿದ್ದ ಇಬ್ಬರು ಸ್ಪಿನ್ನರ್ ಗಳಾದ ಕುಮಾರ ಕಾರ್ತಿಕೇಯ ಹಾಗೂ ಸಾರಾಂಶ್ ಜೈನ್ ಅವರನ್ನು ವಿಶೇಷವಾಗಿ ಶ್ಲಾಘಿಸಿದರು
.
‘‘ಕಾರ್ತಿಕೇಯ ಹಾಗೂ ಸಾರಾಂಶ್ ಅವರು ಮಧ್ಯಪ್ರದೇಶದ ಪರ ಒಟ್ಟಿಗೆ ಸಾಕಷ್ಟು ಪಂದ್ಯಗಳನ್ನು ಆಡಿದ್ದು, ಅವರಲ್ಲಿ ಕೌಶಲ್ಯವಿದೆ. ಈ ಪಿಚ್ನಲ್ಲಿ ಆಡುವುದು ಅತ್ಯಂತ ಕಷ್ಟ’’ ಎಂದು ಪಾಟಿದಾರ್ ಹೇಳಿದರು.
ಪಾಟಿದಾರ್ ಈ ವರ್ಷ ಗೆದ್ದಿುವ ಎರಡನೇ ಪ್ರಮುಖ ಪ್ರಶಸ್ತಿ ಇದಾಗಿದೆ. ಪಾಟಿದಾರ್ ನಾಯಕತ್ವದಲ್ಲಿ ಆರ್ಸಿಬಿ ತಂಡವು ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
Next Story





