‘ಒಂದು ಕಡೆಯಿಂದ ಮುಹಮ್ಮದ್, ಇನ್ನೊಂದು ಕಡೆಯಿಂದ ಕೃಷ್ಣ’: ಶುಭಮನ್ ಗಿಲ್ ರ ಸ್ಟಂಪ್ ಮೈಕ್ ಹೇಳಿಕೆ ವೈರಲ್

Screengrab from the video | PC: X
ಲೀಡ್ಸ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರಥಮ ಟೆಸ್ಟ್ ನ ಐದನೆಯ ದಿನದಾಟದಂದು ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರ ಲಘು ಧಾಟಿಯ ಸ್ಪಂಪ್ ಮೈಕ್ ಹೇಳಿಕೆಯೊಂದು ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪ್ರಥಮ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಮಂಗಳವಾರ ಇಂಗ್ಲೆಂಡ್ ತಂಡದ ವಿಕೆಟ್ ಪಡೆಯಲು ಒಂದು ಕಡೆಯಿಂದ ಮುಹಮ್ಮದ್ ಸಿರಾಜ್ ಹಾಗೂ ಮತ್ತೊಂದು ಕಡೆಯಿಂದ ಪ್ರಸಿದ್ಧ್ ಕೃಷ್ಣ ಬೌಲಿಂಗ್ ದಾಳಿ ನಡೆಸುವಾಗ, “ಒಂದು ಕಡೆ ಮುಹಮ್ಮದ್, ಮತ್ತೊಂದು ಕಡೆ ಕೃಷ್ಣ ಸರ್ವನಾಶ ಮಾಡಲಿದ್ದಾರೆ” ಎಂದು ತಮ್ಮ ತಂಡದ ಬೌಲರ್ ಗಳು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಸರದಿಯನ್ನು ಧೂಳೀಪಟ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಲು ಅವರು ಅವರಿಬ್ಬರ ಹೆಸರುಗಳನ್ನು ಹಾಸ್ಯಮಯವಾಗಿ ಉಲ್ಲೇಖಿಸಿರುವುದು ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ.
ಪಂದ್ಯವು ತೀವ್ರ ಸೆಣಸಾಟದ ಹಂತದಲ್ಲಿದ್ದಾಗ, ಶುಭಮನ್ ಗಿಲ್ ಅವರು “ಒಂದು ಕಡೆ ಮುಹಮ್ಮದ್, ಮತ್ತೊಂದು ಕಡೆ ಕೃಷ್ಣ” ಎಂಬ ಲಘು ಧಾಟಿಯ ಹಾಸ್ಯವು ಸಾಮಾಜಿಕ ಮಾಧ್ಯಮಗಳಲ್ಲಿನ ಅಭಿಮಾನಿಗಳ ಗಮನವನ್ನು ಸೆಳೆದಿದ್ದು, ಅವರು ಶುಭಮನ್ ಗಿಲ್ ರ ಹಾಸ್ಯ ಪ್ರವೃತ್ತಿಯನ್ನು ಪ್ರಶಂಸಿಸಿದ್ದಾರೆ.
ಒಂದು ಬದಿಯಲ್ಲಿ ಮುಹಮ್ಮದ್ ಸಿರಾಜ್ ದಾಳಿ ನಡೆಸುತ್ತಿದ್ದಾಗ, ಮತ್ತೊಂದು ಬದಿಯಿಂದ ಜಸ್ಪ್ರೀತ್ ಬುಮ್ರಾ ಬದಲು ಪ್ರಸಿದ್ಧ್ ಕೃಷ್ಣರನ್ನು ಬೌಲಿಂಗ್ ದಾಳಿಗೆ ಇಳಿಸಿದ ವೇಳೆ ಶುಭಮನ್ ಗಿಲ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ. ಪಂದ್ಯದ ಕೊನೆಯ ದಿನವಾದ ಇಂದು ಸವಾಲಿನ 371 ರನ್ ಗಳ ಗುರಿಯನ್ನು ಬೆನ್ನಟ್ಟಿರುವ ಇಂಗ್ಲೆಂಡ್ ತಂಡ, ಆರಂಭಿಕ ಬ್ಯಾಟರ್ ಗಳಾದ ಬೆನ್ ಡಕೆಟ್ ಹಾಗೂ ಝ್ಯಾಕ್ ಕ್ರಾಲೆ ಅವರ ಮುರಿಯದ ಅಮೋಘ ಶತಕದಾಟದಿಂದ ಭಾರತೀಯ ಬೌಲರ್ ಗಳನ್ನು ಕಂಗೆಡಿಸಿದ್ದಾಗ, ಶುಭಮನ್ ಗಿಲ್ ನೀಡಿದ ಈ ಹೇಳಿಕೆಯು ಅಂತರ್ಜಾಲದಲ್ಲಿ ಮಂದಹಾಸ ತರಿಸಿದ್ದರೂ, ಮೈದಾನದಲ್ಲಿದ್ದ ಭಾರತೀಯ ತಂಡದ ಆಟಗಾರರಿಗೆ ಅಂತಹ ಹುರುಪನ್ನೇನೂ ಮೂಡಿಸಲಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಇಂಗ್ಲೆಂಡ್ ತಂಡ 66 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 291 ರನ್ ಗಳಿಸಿದ್ದು, ಗೆಲುವಿಗಾಗಿ ಇನ್ನುಳಿದ 30 ಓವರ್ ಗಳಲ್ಲಿ 80 ರನ್ ಮಾತ್ರ ಗಳಿಸಬೇಕಿದೆ. ಹೀಗಾಗಿ ಪಂದ್ಯ ಕುತೂಹಲಕರ ಘಟ್ಟ ತಲುಪಿದೆ.
Gill pic.twitter.com/JbY0tb1W7t
— Div (@div_yumm) June 24, 2025