ಇಂಗ್ಲೆಂಡ್ ವಿರುದ್ಧ ಏಕದಿ ಸರಣಿ: ವೆಸ್ಟ್ಇಂಡೀಸ್ ತಂಡ ಪ್ರಕಟ

Photo- PTI
ಲಂಡನ್ : ಇಂಗ್ಲೆಂಡ್ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಏಕದಿನ ಅಂತರ್ರಾಷ್ಟ್ರೀಯ ಕ್ರಿಕೆಟ್ ಸರಣಿಗೆ ವೆಸ್ಟ್ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ತಂಡದಲ್ಲಿ ಹೊಸ ಆಲ್ರೌಂಡರ್ಗಳಾದ ಶೆರ್ಫೇನ್ ರುತ್ಫೋರ್ಡ್ ಹಾಗೂ ಮ್ಯಾಥ್ಯೂ ಫೋರ್ಡ್ ಸ್ಥಾನ ಪಡೆದಿದ್ದಾರೆ.
2019ರಲ್ಲಿ ಏಕೈಕ ಏಕದಿನ ಪಂದ್ಯವನ್ನು ಆಡಿದ್ದ ವಿಕೆಟ್ಕೀಪರ್ ಶೇನ್ ಡೌರಿಚ್ ಹಾಗೂ 2021ರ ಜನವರಿಯಲ್ಲಿ 2 ಏಕದಿನ ಪಂದ್ಯಗಳನ್ನು ಆಡಿದ್ದ ಓಪನಿಂಗ್ ಬ್ಯಾಟರ್ ಜೋರ್ನ್ ಒಟ್ಲಿ ಅವರಿಗೆ ಕರೆ ನೀಡಲಾಗಿದೆ.
25ರ ಹರೆಯದ ಮಧ್ಯಮ ಸರದಿಯ ಬ್ಯಾಟರ್ ರುಥರ್ಫೋರ್ಡ್ ಆರು ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.
ಶಾಯ್ ಹೋಪ್ ನೇತೃತ್ವದ ವೆಸ್ಟ್ಇಂಡೀಸ್ ತಂಡ ಡಿಸೆಂಬರ್ 3 ಹಾಗೂ 6ರಂದು ಆ್ಯಂಟಿಗುವಾದಲ್ಲಿ ಹಾಗೂ ಡಿ.9ರಂದು ಬಾರ್ಬಡೋಸ್ನಲ್ಲಿ ಇಂಗ್ಲೆಂಡ್ ಸವಾಲನ್ನು ಎದುರಿಸಲಿದೆ.
ಜೇಸನ್ ಹೋಲ್ಡರ್ ಹಾಗೂ ನಿಕೊಲಸ್ ಪೂರನ್ ಇತರ ಮಾದರಿಯ ಕ್ರಿಕೆಟ್ಗೆ ಆದ್ಯತೆ ನೀಡಿರುವ ಕಾರಣ ಈ ಇಬ್ಬರು ಸರಣಿಗೆ ಲಭ್ಯವಿಲ್ಲ.
ಏಕದಿನ ಸರಣಿಯ ನಂತರ ವೆಸ್ಟ್ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಐದು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡಲಿವೆ.
ವೆಸ್ಟ್ಇಂಡೀಸ್ ತಂಡ: ಶಾಯ್ ಹೋಪ್(ನಾಯಕ), ಅಲಿಕ್ ಅಥನಾಝೆ, ಯಾನಿಕ್ ಕ್ಯಾರಿಯಾ, ಕೀಸಿ ಪಾರ್ಟಿ, ರೋಸ್ಟನ್ ಚೇಸ್, ಶೇನ್ ಡೌರಿಚ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಗುಡಾಕೇಶ್ ಮೋಟಿ, ಜೋರ್ನ್ ಒಟ್ಲಿ, ಶೆರ್ಫೆನ್ ರುದರ್ಫೋರ್ಡ್, ರೊಮಾರಿಯೊ ಶೆಫರ್ಡ್, ಒಶಾನ್ ಥಾಮಸ್.