Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಕೊನೆಗೂ ನನಸಾಗಲಿಲ್ಲ ಫುಟ್ಬಾಲ್ ಚಾಂಪಿಯನ್...

ಕೊನೆಗೂ ನನಸಾಗಲಿಲ್ಲ ಫುಟ್ಬಾಲ್ ಚಾಂಪಿಯನ್ ಶಿಪ್ ಗೆಲ್ಲುವ ಇಂಗ್ಲೆಂಡ್ ಕನಸು

ಯೂರೋಪಿನ ಹೊಸ ಫುಟ್ ಬಾಲ್ ಚಾಂಪಿಯನಾಗಿ ಹೊರಹೊಮ್ಮಿದ ಸ್ಪೇನ್ ► ಗಮನ ಸೆಳೆದ ಚಾಂಪಿಯನ್ ತಂಡದ ಬಾಲಕ ಸೂಪರ್ ಸ್ಟಾರ್ ಲಾಮೈನ್‌ ಯಮಾಲ್‌

ವಾರ್ತಾಭಾರತಿವಾರ್ತಾಭಾರತಿ15 July 2024 10:27 PM IST
share
ಕೊನೆಗೂ ನನಸಾಗಲಿಲ್ಲ ಫುಟ್ಬಾಲ್ ಚಾಂಪಿಯನ್ ಶಿಪ್ ಗೆಲ್ಲುವ ಇಂಗ್ಲೆಂಡ್ ಕನಸು

ರವಿವಾರ, ಜುಲೈ 14ರ ತಡರಾತ್ರಿ ಬರ್ಲಿನ್‌ನಲ್ಲಿ ನಡೆದ 2024ರ ಯುರೋ ಫೈನಲ್ ಪಂದ್ಯದಲ್ಲಿ ಸ್ಪೇನ್ 2-1 ಗೋಲುಗಳ ಅಂತರದಿಂದ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. ಸ್ಪೇನ್ ತಂಡವು ಯುರೋ ಕಪ್ ಇತಿಹಾಸದಲ್ಲಿ ಗರಿಷ್ಟ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯಂತ ಯಶಸ್ವಿ ರಾಷ್ಟ್ರವಾಗಿ ದಾಖಲೆಯನ್ನು ಸೃಷ್ಟಿಸಿದೆ.

ಪಂದ್ಯದ 87ನೇ ನಿಮಿಷದಲ್ಲಿ ಮೈಕೆಲ್ ಒಯರ್ಝೆಬಲ್ ಗಳಿಸಿದ ಗೋಲಿನ ನೆರವಿನಿಂದ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳ ಜಯ ಸಾಧಿಸಿದ ಸ್ಪೇನ್, ಐತಿಹಾಸಿಕ ನಾಲ್ಕನೇ ಬಾರಿ ಯೂರೋಪಿಯನ್ ಚಾಂಪಿಯನ್ ಶಿಪ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ ಸ್ಪೇನ್ ದೇಶದ ಯುರೋ ಗೆಲುವಿನ ದಾಖಲೆ ಮತ್ತಷ್ಟು ವಿಸ್ತರಿಸಲ್ಪಟ್ಟಿದೆ. ಇದಕ್ಕೂ ಮುನ್ನ 1964, 2008 ಹಾಗೂ 2012ರಲ್ಲಿ ಸ್ಪೇನ್ ಈ ಪ್ರಶಸ್ತಿ ಪಡೆದಿತ್ತು.

ಪಂದ್ಯ ಇನ್ನೇನು ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾಗುತ್ತದೆ ಎಂಬ ಹಂತದಲ್ಲಿ ಮಾರ್ಕ್ ಕುಕ್ರೆಲ್ಲಾ ಅವರ ಕ್ರಾಸ್ ಅನ್ನು ನಿಯಂತ್ರಣಕ್ಕೆ ಪಡೆದ ಮೈಕಲ್ ಒಯರ್ಝಬಲ್ ಅದನ್ನು ಗೋಲಾಗಿ ಪರಿವರ್ತಿಸುವ ಮೂಲಕ ನಿರ್ಣಾಯಕ ಗೋಲು ಗಳಿಸಿದರು.

ಇದಕ್ಕೂ ಮುನ್ನ ಪಂದ್ಯದಲ್ಲಿ ಸಮಬಲ ಸಾಧಿಸುವ ಇಂಗ್ಲೆಂಡ್ ಪ್ರಯತ್ನದಲ್ಲಿ ಬದಲಿ ಆಟಗಾರ ಕೋಲ್ ಪಾಲ್ಮರ್ ಯಶಸ್ವಿಯಾದರು. 73ನೇ ನಿಮಿಷದಲ್ಲಿ ಅವರು ಗಳಿಸಿದ ಗೋಲು, ಪಂದ್ಯದ ಉತ್ತರಾರ್ಧದಲ್ಲಿ ನಿಕೊ ವಿಲಿಯಮ್ಸ್ ಗಳಿಸಿದ ಮುನ್ನಡೆಯನ್ನು ಸಮಗೊಳಿಸಿತು. ಸ್ಪೇನ್ ಪರವಾಗಿ ವಿಲಿಯಮ್ಸ್ 47ನೇ ನಿಮಿಷದಲ್ಲಿ, 17 ವರ್ಷದ ಲಮೈನ್ ಯಮಾಲ್ ಅವರ ನೆರವಿನಿಂದ ಮೊದಲ ಗೋಲು ಗಳಿಸಿದರು.

ಭವಿಷ್ಯದ ಸೂಪರ್ ಸ್ಟಾರ್, ಬಾಲಕ ಲಾಮೈನ್‌ ಯಮಾಲ್‌ ಚಾಂಪಿಯನ್ ಸ್ಪೇನ್ ತಂಡದ ನೂತನ ತಾರೆಯಾಗಿ ಕಾಣಿಸಿಕೊಂಡಿದ್ದಾರೆ. ಮೊರಕ್ಕೋ ಮೂಲದ ಮುನೀರ್ ನಸ್ರೋಹಿಯ ಪುತ್ರ ಲ್ಯಾಮಿನ್ ಯಮಾಲ್‌ ಅವರು ರವಿವಾರ ಇಂಗ್ಲೆಂಡ್ ವಿರುದ್ಧ ಯುರೋ 2024 ರ ಫೈನಲ್‌ನಲ್ಲಿ ಸ್ಪೇನ್‌ ಪರವಾಗಿ ಆರಂಭಿಸಿದಾಗ 66 ವರ್ಷಗಳ ದಾಖಲೆಯನ್ನು ಮುರಿದರು.

ಈ ಚಾಂಪಿಯನ್ ಶಿಪ್ ನಲ್ಲಿ ಸೆಮಿಫೈನಲ್‌ ಪಂದ್ಯಕ್ಕಿಂತ ಮೊದಲು 3 ಗೋಲು ಹೊಡೆದಿದ್ದಾಗ ಯಮಾಲ್ ವಯಸ್ಸು ಕೇವಲ 16. ಈಗ 17 ವರ್ಷ ವಯಸ್ಸಿನ ಯಮಾಲ್‌ ಫ್ರಾನ್ಸ್‌ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಅದ್ಭುತ ಗೋಲು ಹೊಡೆದು ಗಮನ ಸೆಳೆದಿದ್ದರು. ತನ್ನ 17 ನೇ ಹುಟ್ಟುಹಬ್ಬವನ್ನು ಆಚರಿಸಿದ ಒಂದು ದಿನದ ನಂತರ, 1958 ರ ವಿಶ್ವಕಪ್ ಫೈನಲ್‌ನಲ್ಲಿ ಬ್ರೆಝಿಲ್ ನ ದಂತಕತೆ ಪೀಲೆ ನಿರ್ಮಿಸಿದ ದಾಖಲೆ ಮುರಿದರು.

ಪ್ರಮುಖ ಅಂತರರಾಷ್ಟ್ರೀಯ ಫೈನಲ್‌ನಲ್ಲಿ ಆಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿ ಕೊಂಡರು. ಯುರೋಪಿಯನ್ ಚಾಂಪಿಯನ್‌ಶಿಪ್ ಆರಂಭವಾದ ನಂತರ ಬಾರ್ಸಿಲೋನಾ ಕ್ಲಬ್ ನ ಈ ಯುವ ಆಟಗಾರ ಮುರಿದಿರುವ ಮೊದಲ ದಾಖಲೆಯಲ್ಲ ಇದು. ಅವರು ತಮ್ಮ ತಂಡದ ಆರಂಭಿಕ ಪಂದ್ಯದಲ್ಲಿ ಕ್ರೊಯೇಷಿಯಾ ವಿರುದ್ಧ ಆಡಿದಾಗ ಯುರೋಪಿಯನ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರರಾದರು.

ಅವರು ಫ್ರಾನ್ಸ್ ವಿರುದ್ಧದ ಸೆಮಿ-ಫೈನಲ್ ಗೆಲುವಿನಲ್ಲಿ ಗೋಲ್ ಹೊಡೆದಾಗ ಸ್ಪರ್ಧೆಯ ಇತಿಹಾಸದಲ್ಲೇ ಅತ್ಯಂತ ಕಿರಿಯ ಗೋಲ್ ಸ್ಕೋರರಾದರು. ವಿಶೇಷವೆಂದರೆ, ನಿನ್ನೆ ರಾತ್ರಿ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯವು ಹೆಚ್ಚುವರಿ ಸಮಯಕ್ಕೆ ಹೋಗಿದ್ದರೆ ಮತ್ತು ಯಮಾಲ್‌ ಆಡುವುದನ್ನು ಮುಂದುವರಿಸಿದ್ದರೆ ಸ್ಪೇನ್ ದಂಡ ಕಟ್ಟಬೇಕಾಗಿತ್ತು. ಕಾರಣ ಏನು ಗೊತ್ತೇ?

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರಾದರೂ ರಾತ್ರಿ 8 ಗಂಟೆಯ ನಂತರ ಕೆಲಸ ಮಾಡುವುದನ್ನು ಜರ್ಮನ್ ಕಾನೂನು ತಡೆಯುತ್ತದೆ. ಆಟಗಾರರಿಗೆ 11 ಗಂಟೆವರೆಗೆ ರಿಯಾಯಿತಿ ಇದೆ. ಆದ್ದರಿಂದ, ನಿನ್ನೆ ಪಂದ್ಯ ಹೆಚ್ಚುವರಿ ಸಮಯಕ್ಕೆ ಹೋಗಿದ್ದರೆ, 17 ವರ್ಷ ಪ್ರಾಯದ ಯಮಾಲ್‌ ಒಂದೋ ಮೈದಾನದಿಂದ ಹೊರನಡೆಯಬೇಕಿತ್ತು ಅಥವಾ ಸ್ಪೇನ್ ದಂಡ ಕಟ್ಟಬೇಕಾಗಿತ್ತು. ಆದರೆ ಇದ್ದ ಸಮಯದಲ್ಲೇ ಸ್ಪೇನ್ ಜಯ ಗಳಿಸಿದ ಕಾರಣ ಈ ಪರಿಸ್ಥಿತಿ ಉಂಟಾಗಲಿಲ್ಲ.

ಇನೊಂದೆಡೆ ಇಂಗ್ಲೆಂಡ್ ಸತತ ಎರಡನೇ ಬಾರಿಗೆ ಯುರೋ ಫೈನಲ್‌ನಲ್ಲಿ ಹಿನ್ನಡೆ ಅನುಭವಿಸಿತು. 2021ರಲ್ಲಿ ಪೆನಾಲ್ಟಿ ಆಘಾತದ ನಂತರ, ತ್ರೀ ಲಯನ್ಸ್ ಮತ್ತೊಮ್ಮೆ ಫೈನಲ್ ನಲ್ಲಿ ಎಡವಿತು. ಈ ಫಲಿತಾಂಶದಿಂದಾಗಿ, 1966ರಲ್ಲಿ ವಿಶ್ವಕಪ್ ಗೆದ್ದ ಬಳಿಕ ಇಂಗ್ಲೆಂಡ್ ತಂಡದ ಸುದೀರ್ಘ ಅವಧಿಯ ಪ್ರಶಸ್ತಿ ಬರದ ಸರಣಿ ಮುಂದುವರಿದಂತಾಗಿದೆ. ಇದೀಗ ಯೂರೊ ಫೈನಲ್ ನಲ್ಲಿ ಕೂಡಾ ಇಂಗ್ಲೆಂಡ್ ನಿರಾಸೆ ಅನುಭವಿಸಿದೆ. ಅಂತರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ತನ್ನ ಸಾಮರ್ಥ್ಯವನ್ನು ಯಶಸ್ಸಾಗಿ ಪರಿವರ್ತಿಸಲು ಇಂಗ್ಲೆಂಡ್ ಮತ್ತೆ ವಿಫಲವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X