ಬಾಸ್ಕೆಟ್ಬಾಲ್ ಏಶ್ಯಕಪ್-2025: ಭಾರತ ತಂಡ ನಿರ್ಗಮನ

Picture by FIBA
ರಿಯಾದ್, (ಆ.10): ‘ಸಿ’ ಗುಂಪಿನಲ್ಲಿ ಸತತ ಮೂರನೇ ಸೋಲು ಕಂಡಿರುವ ಭಾರತ ತಂಡವು ಫಿಬಾ ಏಶ್ಯಕಪ್ ಪುರುಷರ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್ನಿಂದ ನಿರ್ಗಮಿಸಿದೆ.
ಶನಿವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಸೌದಿ ಅರೇಬಿಯ ತಂಡದ ಎದುರು 59-84 ಅಂತರದಿಂದ ಸೋಲುಂಡಿದೆ.
ಚೀನಾ ತಂಡವು ‘ಸಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದಿದ್ದು, ನಾಕೌಟ್(ಕ್ವಾರ್ಟರ್ ಫೈನಲ್) ಹಂತಕ್ಕೆ ನೇರ ಪ್ರವೇಶ ಪಡೆದಿದೆ. ಸೌದಿ ಅರೇಬಿಯಾ 2ನೇ ಹಾಗೂ ಜೋರ್ಡನ್ 3ನೇ ಸ್ಥಾನ ಪಡೆದಿದೆ.
ಭಾರತವು ಮೊದಲ ಕ್ವಾರ್ಟರ್ನಲ್ಲಿ ಉತ್ತಮ ಹೋರಾಟ ನೀಡಿದ್ದು, ಡಿಫೆನ್ಸ್ ವಿಭಾಗದಲ್ಲಿ 20 ಅಂಕ ಗಳಿಸಿದ ಪಲ್ಪ್ರೀತ್ ಸಿಂಗ್ ಬ್ರಾರ್ ಪ್ರಮುಖ ಪಾತ್ರವಹಿಸಿದ್ದು, ಮಧ್ಯಂತರದಲ್ಲಿ 2 ಅಂಕ ಗಳಿಸಿದ್ದರು.
2ನೇ ಕ್ವಾರ್ಟರ್ನಲ್ಲಿ ಆತಿಥೇಯ ತಂಡವು 14 ಅಂಕದಿಂದ ಮುನ್ನಡೆ ಪಡೆಯಿತು. ಸತತವಾಗಿ ಅಂಕ ಗಳಿಸಿದ ಸೌದಿ ತಂಡವು ಭಾರತಕ್ಕೆ ಒತ್ತಡ ಹೇರುವಲ್ಲಿ ಶಕ್ತವಾಯಿತು.
ಭಾರತದ ಫಾರ್ವರ್ಡ್ ಆಟಗಾರ ಪ್ರಣವ್ ಪ್ರಿನ್ಸ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿತ್ತು, ಆದರೆ ಅವರು ನಿರಾಶೆಗೊಳಿಸಿದರು.





