FIFA 2026 | ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದ ಈಜಿಪ್ಟ್ ಕೋಚ್

Photo Credit : ANI
ಡಲ್ಲಾಸ್, ಜು. 4: ಶುಕ್ರವಾರ ಫಿಫಾ ವಿಶ್ವಕಪ್ನಲ್ಲಿ ಈಜಿಪ್ಟ್ ತಂಡವು ಆಸ್ಟ್ರೇಲಿಯ ವಿರುದ್ಧ ಐತಿಹಾಸಿಕ ಜಯಗಳಿಸಿ, ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ 16ರ ಸುತ್ತಿಗೆ ಪ್ರವೇಶ ಪಡೆದ ಬಳಿಕ, ತಂಡದ ಮುಖ್ಯ ಕೋಚ್ ಹುಸಮ್ ಹಸನ್ ಮೈದಾನದಲ್ಲಿ ಫೆಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದರು ಹಾಗೂ ಈ ಗೆಲುವನ್ನು ಫೆಲೆಸ್ತೀನ್ ಜನರಿಗೆ ಸಮರ್ಪಿಸಿದರು.
ಪೆನಾಲ್ಟಿ ಶೂಟೌಟ್ನಲ್ಲಿ ಆಸ್ಟ್ರೇಲಿಯವನ್ನು ಈಜಿಪ್ಟ್ ಮಣಿಸಿದ ಬಳಿಕ, ಹಸನ್ ಫೆಲೆಸ್ತೀನ್ ಧ್ವಜದೊಂದಿಗೆ ಸಂಭ್ರಮಿಸಿದರು. ಬಳಿಕ, ಪಂದ್ಯಾನಂತರದ ಮಾಧ್ಯಮಗೋಷ್ಠಿಯಲ್ಲಿ ಫೆಲೆಸ್ತೀನೀಯರಿಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿದರು.
‘‘ನನ್ನ ಹೃದಯ ಮತ್ತು ಆತ್ಮ ಅವರೊಂದಿಗಿದೆ ಮತ್ತು ದೇವರು ಅವರ ಹುತಾತ್ಮರ ಮೇಲೆ ಕರುಣೆ ತೋರಲಿ’’ ಎಂದು ಅವರು ಹೇಳಿದರು. ‘‘ನಾನು ಈ ಗೆಲುವನ್ನು ಈಜಿಪ್ಟ್ ಜನರಿಗೆ ಮತ್ತು ಒಳ್ಳೆಯ ಹಾಗೂ ಉದಾರ ಮನಸ್ಸಿನ ಫೆಲೆಸ್ತೀನ್ ಜನರಿಗೆ ಸಮರ್ಪಿಸುತ್ತೇನೆ’’ ಎಂದರು.
Next Story




