FIFA 2026 | ಆರು ವಿಶ್ವಕಪ್ ಪಂದ್ಯಗಳನ್ನಾಡಿದ ವಿಶ್ವದ ಮೂರನೇ ಆಟಗಾರ ಒಚೋವಾ

ಗಿಲೆರ್ಮೊ ಒಚೋವಾ | Photo Credit : AP
ಮೆಕ್ಸಿಕೋ ಸಿಟಿ, ಜೂ.25: ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಿಯೊನೆಲ್ ಮೆಸ್ಸಿ ನಂತರ ಆರನೇ ವಿಶ್ವಕಪ್ ಪಂದ್ಯವನ್ನಾಡಿದ ಮೂರನೇ ಆಟಗಾರ ಎನಿಸಿಕೊಂಡಿರುವ ಮೆಕ್ಸಿಕೋದ ಗಿಲೆರ್ಮೊ ಒಚೋವಾ ಫಿಫಾ ವಿಶ್ವಕಪ್ ಇತಿಹಾಸದ ವಿಶೇಷ ಪಟ್ಟಿಗೆ ಸೇರ್ಪಡೆಯಾದರು.
ಒಚೋವಾ ಈ ಸಾಧನೆ ಮಾಡಿದ ಮೊದಲ ಗೋಲ್ಕೀಪರ್ ಆಗಿದ್ದಾರೆ.
ಮೆಕ್ಸಿಕೋ ತಂಡವು ಬುಧವಾರ ಝೆಕ್ ಗಣರಾಜ್ಯದ ವಿರುದ್ಧ ಆಡಿರುವ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಗೋಲ್ಕೀಪರ್ ಈ ಮೈಲಿಗಲ್ಲು ತಲುಪಿದರು.
ಬದಲಿ ಆಟಗಾರನಾಗಿ ಪಂದ್ಯದ ಅಂತ್ಯದಲ್ಲಿ ಕಣಕ್ಕಿಳಿದಿದ್ದ ಒಚೋವಾ ಅವರು 2006ರಲ್ಲಿ ಆರಂಭವಾಗಿರುವ ತನ್ನ ವಿಶ್ವಕಪ್ ಪಯಣದಲ್ಲಿ ಮತ್ತೊಂದು ಅಧ್ಯಾಯ ಆರಂಭಿಸಿದರು.
ಒಚೋವಾ 2006, 2010, 2014, 2018, 2022, ಇದೀಗ 2026ರಲ್ಲಿ ಮೆಕ್ಸಿಕೋ ವಿಶ್ವಕಪ್ ತಂಡದ ಭಾಗವಾಗಿದ್ದಾರೆ. 2006 ಹಾಗೂ 2010ರ ಆವೃತ್ತಿಗಳಲ್ಲಿ ಯಾವುದೇ ಪಂದ್ಯವನ್ನು ಆಡದೇ ಇದ್ದರೂ ವಿಶ್ವಕಪ್ ಹಂತದಲ್ಲಿ ಮೆಕ್ಸಿಕೋದ ಓರ್ವ ಪ್ರಮುಖ ಆಟಗಾರನಾಗಿದ್ದಾರೆ.
ಮೆಸ್ಸಿಹಾಗೂ ರೊನಾಲ್ಡೊ ಅವರಂತೆ 2006ರಿಂದ ಪ್ರತಿಯೊಂದು ವಿಶ್ವಕಪ್ ಟೂರ್ನಿಗಳಲ್ಲಿ ಆಡುತ್ತಿದ್ದಾರೆ.




