ಫಿಫಾ ಅರ್ಹತಾ ಪಂದ್ಯ: ಬ್ರೆಝಿಲ್ - ಅರ್ಜೆಂಟೀನ ಪಂದ್ಯದ ವೇಳೆ ಗುಂಪು ಘರ್ಷಣೆ
ಆಘಾತ ವ್ಯಕ್ತಪಡಿಸಿದ ಲಿಯೊನೆಲ್ ಮೆಸ್ಸಿ

Photo: X//tv3_ghana
ಮಾಂಟೆವಿಡಿಯೊ: ಬ್ರೆಝಿಲ್ ಮತ್ತು ಅರ್ಜೆಂಟೀನದ ನಡುವಿನ FIFA ವಿಶ್ವಕಪ್ ಅರ್ಹತಾ ಪಂದ್ಯ ಆರಂಭಗೊಳ್ಳುವ ಮುನ್ನ ಮರಕಾನಾ ಕ್ರೀಡಾಂಗಣದಲ್ಲಿ ಅಭಿಮಾನಿಗಳ ನಡುವೆ ಘರ್ಷಣೆ ನಡೆದಿದ್ದು, ಪಂದ್ಯಾಟ ಅರ್ಧ ಗಂಟೆ ತಡವಾಗಿ ಆರಂಭಗೊಮಡಿದೆ.
ರಾಷ್ಟ್ರಗೀತೆ ಹಾಡುವ ಸಮಾರಂಭದಲ್ಲಿ ಬ್ರೆಝಿಲಿಯನ್ನರು ಮತ್ತು ಅರ್ಜೆಂಟೀನಾದ ಬೆಂಬಲಿಗರ ನಡುವೆ ಗೊಂದಲ ಉಂಟಾಗಿದ್ದು, ಬ್ರೆಝಿಲ್ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಉದ್ರಿಕ್ತ ಅಭಿಮಾನಿಗಳು ಪೊಲೀಸ್ ಅಧಿಕಾರಿಗಳ ಮೇಲೆಯೇ ಕುರ್ಚಿಗಳನ್ನು ಎಸೆದು ಆಕ್ರೋಶ ಹೊರ ಹಾಕಿದ್ದಾರೆ.
ಮೈದಾನದಲ್ಲಿ ಉಂಟಾದ ಗೊಂದಲದ ವಾತಾವರಣದಿಂದ ಪ್ರೇಕ್ಷಕರು ಆತಂಕಕ್ಕೊಳಗಾಗಿದ್ದು, ಘರ್ಷಣೆಯಿಂದ ತಪ್ಪಿಸಿಕೊಳ್ಳಲು ಹಲವರು ಮೈದಾನದೆಡೆಗೆ ನುಗ್ಗಿದ್ದಾರೆ.
ಅರ್ಜೆಂಟೀನಾದ ಓರ್ವ ಅಭಿಮಾನಿ ಗಂಭೀರ ಗಾಯಗೊಂಡಿದ್ದು, ತೀವ್ರ ರಕ್ತಸ್ರಾವವಾಗುತ್ತಿದ್ದ ಆತನನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಡ್ರೆಸಿಂಗ್ ರೂಮ್ ಬಳಿಯ ಟೆರೇಸ್ಗೆ ಬಂದ ಅರ್ಜೆಂಟೀನಾ ತಂಡ ಶಾಂತಿಗಾಗಿ ಮನವಿ ಮಾಡಿದೆ.
ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಲಿಯೊನೆಲ್ ಮೆಸ್ಸಿ, "ಅವರು ಜನರನ್ನು ಹೇಗೆ ಹೊಡೆಯುತ್ತಿದ್ದಾರೆ, ಮತ್ತೆ ಜನರನ್ನು ದಮನ ಮಾಡುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ" ಎಂದು ಹೇಳಿದ್ದಾರೆ.
ಐದು ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ಬ್ರೆಝಿಲ್, ಇತಿಹಾಸದಲ್ಲಿ ಮೊದಲ ಬಾರಿಗೆ ಸತತವಾಗಿ ಅರ್ಹತಾ ಸುತ್ತಿನಲ್ಲಿ ಸೋಲುಗಳನ್ನು ಎದುರಿಸಿದೆ.
Messi : “we’re not playing, we’re leaving”
— Shekhar Dutt (@DuttShekhar) November 22, 2023
Argentina-Brazil match started with clashes
pic.twitter.com/0bB1weoHYs







