FIFA World Cup 2026 | ಬಿಸಿಲಿನ ಬೇಗೆಗೆ ಕುಸಿದು ಬಿದ್ದ ರೆಫರಿ!

ಬೋಸ್ಟನ್, ಜೂ.20: ಫಿಫಾ ವಿಶ್ವಕಪ್ ಪಂದ್ಯಾವಳಿಯು ಹಲವು ಅಚ್ಚರಿಯ ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದು, ಇದೇ ಮೊದಲ ಬಾರಿ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಫೆಲಿಕ್ಸ್ ಝ್ವೆಯರ್ ಬಿಸಿಲಿನ ಬೇಗೆಗೆ ಕುಸಿದು ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.
ಆಸ್ಟ್ರೇಲಿಯ ತಂಡವು ಅಮೆರಿಕ ತಂಡದ ವಿರುದ್ಧ 0-2 ಅಂತರದಿಂದ ಸೋಲುವ ಪಂದ್ಯದಲ್ಲಿ ಝ್ವೆಯರ್ ತೀವ್ರ ಉಷ್ಣಾಂಶದಿಂದಾಗಿ ಮೈದಾನದಲ್ಲಿ ಕುಸಿದುಬಿದ್ದರು.
ಜರ್ಮನಿಯ ರೆಫರಿ ಇಂಜುರಿ ಟೈಮ್ ವೇಳೆ ನೋವಿನಿಂದ ಬಳಲುತ್ತಿದ್ದಂತೆ ಕಂಡುಬಂದರು.
ಆಸ್ಟ್ರೇಲಿಯದ ಡಿಫೆಂಡರ್ ಐಡೆನ್ ಓ’ನೀಲ್ ಅವರು ನಿಲ್ಲಲು ಪರದಾಡುತ್ತಿದ್ದ ಝ್ವೆಯರ್‌ಗೆ ನೆರವಾದರು. ‘ರೆಫರಿಗೆ ಆಟಗಾರನೊಬ್ಬ ಈ ರೀತಿ ನೆರವಾಗುತ್ತಿರುವುದನ್ನು ನಾನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ’ ಎಂದು ವೀಕ್ಷಕ ವಿವರಣೆಗಾರ ಡೇವಿಡ್ ಬಶೀರ್ ಅಭಿಪ್ರಾಯಪಟ್ಟಿದ್ದಾರೆ.
ಚಿಕಿತ್ಸೆ ಪಡೆದ ನಂತರ ಆಟಗಾರರ ಸಹಾಯದಿಂದ ಝ್ವೆಯರ್ ಅವರು ತಮ್ಮ ಕರ್ತವ್ಯವನ್ನು ಮುಂದುವರಿಸಿದರು. ಪಂದ್ಯವನ್ನು ಪೂರ್ಣಗೊಳಿಸಿದರು. ಈ ಘಟನೆಯು ಪ್ರಸಕ್ತ ವಿಶ್ವಕಪ್ ಗೆ ಮತ್ತೊಂದು ಸ್ಮರಣೀಯ ಅಧ್ಯಾಯವನ್ನು ಸೇರಿಸಿದೆ.




