FIFA WORLD CUP 2026 | ಇರಾನ್-ಬೆಲ್ಜಿಯಂ ಪಂದ್ಯ ಗೋಲುರಹಿತ ಡ್ರಾ

Photo Credit : aljazeera.com
ಲಾಸ್ ಏಂಜಲೀಸ್, ಜೂ.22: ಹತ್ತು ಆಟಗಾರರನ್ನು ಹೊಂದಿದ್ದ ಬೆಲ್ಜಿಯಂ ತಂಡವು ವಿಶ್ವಕಪ್ ಟೂರ್ನಿಯ ‘ಜಿ’ ಗುಂಪಿನ ಪಂದ್ಯದಲ್ಲಿ ಇರಾನ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದೆ. ಇರಾನ್ನ ಬಲಿಷ್ಠ ರಕ್ಷಣಾ ಗೋಡೆಯನ್ನು ಭೇದಿಸಲು ಬೆಲ್ಜಿಯಂ ವಿಫಲವಾಯಿತು.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೋಲ್ಕೀಪರ್ ಅಲಿರೆಝಾ ಏಳು ಪ್ರಯತ್ನಗಳನ್ನು ತಡೆದು ಇರಾನ್ ತಂಡಕ್ಕೆ ಒಂದು ಅಂಕ ತಂದುಕೊಟ್ಟರು.
ದ್ವಿತೀಯಾರ್ಧದಲ್ಲಿ ನಾಥನ್ ಗೊಯ್ ರೆಡ್ ಕಾರ್ಡ್ ಪಡೆದ ಕಾರಣ ಬೆಲ್ಜಿಯಂ ತಂಡವು 10 ಆಟಗಾರರೊಂದಿಗೆ ಆಡುವಂತಾಯಿತು.
ಇರಾನ್ ತಂಡವು ಒಟ್ಟು ಎರಡು ಅಂಕಗಳನ್ನು ಗಳಿಸಿದ್ದು, ಶುಕ್ರವಾರ ಸಿಯಾಟಲ್ನಲ್ಲಿ ಈಜಿಪ್ಟ್ ತಂಡವನ್ನು ಎದುರಿಸಲಿದೆ. ಬೆಲ್ಜಿಯಂ ತಂಡವೂ ಎರಡು ಅಂಕಗಳನ್ನು ಗಳಿಸಿದ್ದು, ವಾಂಕೋವರ್ನಲ್ಲಿ ನ್ಯೂಝಿಲ್ಯಾಂಡ್ ಸವಾಲು ಎದುರಿಸಲಿದೆ.
Next Story




