FIFA World Cup 2026 Final | ಹಾಫ್ ಟೈಮ್: ಸ್ಪೇನ್ 0–0 ಅರ್ಜೆಂಟೀನಾ

Photo credit: X/@FIFAWorldCup
ನ್ಯೂಯಾರ್ಕ್: ಇಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫೈನಲ್ನ ಮೊದಲಾರ್ಧದ ಆಟ ಗೋಲುರಹಿತ ಸಮಬಲದಲ್ಲಿ ಅಂತ್ಯಗೊಂಡಿದೆ. ಈ ಅವಧಿಯಲ್ಲಿ ಸ್ಪೇನ್ ಆಟದ ಮೇಲೆ ಸ್ಪಷ್ಟ ಹಿಡಿತ ಸಾಧಿಸಿ ಹೆಚ್ಚಿನ ಸಮಯ ಚೆಂಡಿನ ನಿಯಂತ್ರಣ ಕಾಯ್ದುಕೊಂಡಿತು. ಆದರೆ, ಆ ಪ್ರಾಬಲ್ಯವನ್ನು ಗೋಲಾಗಿ ಪರಿವರ್ತಿಸುವಲ್ಲಿ ತಂಡ ವಿಫಲವಾಯಿತು.
ಅರ್ಜೆಂಟೀನಾ ಮೊದಲ 45 ನಿಮಿಷಗಳಲ್ಲಿ ಸಂಪೂರ್ಣವಾಗಿ ಒತ್ತಡಕ್ಕೆ ಸಿಲುಕಿತು. ತಂಡಕ್ಕೆ ಒಂದೇ ಒಂದು ಕಾರ್ನರ್ ಕೂಡ ದೊರೆಯಲಿಲ್ಲ. ಗೋಲು ಕಡೆಗೆ ಒಂದೇ ಒಂದು ಪ್ರಯತ್ನವನ್ನೂ ದಾಖಲಿಸಲು ಸಾಧ್ಯವಾಗಲಿಲ್ಲ. ಇದಲ್ಲದೆ, ಸ್ಪೇನ್ ನ ಪೆನಾಲ್ಟಿ ಪ್ರದೇಶದೊಳಗೆ ಒಂದೇ ಒಂದು ಸ್ಪರ್ಶವನ್ನೂ ಮಾಡಲಾಗಲಿಲ್ಲ.
ಆಟದ ನಿಯಂತ್ರಣ ಸ್ಪೇನ್ ಕೈಯಲ್ಲಿದ್ದರೂ, ಅರ್ಜೆಂಟೀನಾದ ರಕ್ಷಣಾ ಸಾಲನ್ನು ಭೇದಿಸಿ ಸ್ಪಷ್ಟ ಗೋಲು ಅವಕಾಶಗಳನ್ನು ಸೃಷ್ಟಿಸುವಲ್ಲಿ ಸ್ಪೇನ್ ಕೂಡ ಹೆಣಗಾಡಿತು. ಪರಿಣಾಮ, ಎರಡೂ ತಂಡಗಳು 0–0 ಸಮಬಲದೊಂದಿಗೆ ಹಾಫ್ ಟೈಮ್ ವಿರಾಮಕ್ಕೆ ತೆರಳಿದವು.
Next Story




