FIFA world cup 2026 | ಜೋರ್ಡಾನ್ ವಿರುದ್ಧ ಗ್ರೂಪ್ ಪಂದ್ಯದಿಂದ ಮೆಸ್ಸಿಗೆ ವಿಶ್ರಾಂತಿ

ಲಿಯೊನೆಲ್ ಮೆಸ್ಸಿ | Photo Credit : PTI
ಹ್ಯೂಸ್ಟನ್, ಜೂ.27: ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ರವಿವಾರ ಬೆಳಿಗ್ಗೆ 'ಜೆ' ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಜೋರ್ಡಾನ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ನಾಯಕ ಲಿಯೊನೆಲ್ ಮೆಸ್ಸಿ ಆಡುವುದಿಲ್ಲ.
ಅರ್ಜೆಂಟೀನಾ ತಂಡವು ಈಗಾಗಲೇ 'ಜೆ' ಗುಂಪಿನಲ್ಲಿ ಅಗ್ರ ಸ್ಥಾನ ಪಡೆದು ಮುಂದಿನ ಸುತ್ತಿಗೆ ಪ್ರವೇಶಿಸಿದೆ.
ಮೆಸ್ಸಿ ಅರ್ಜೆಂಟೀನಾದ ದಾಳಿಯನ್ನು ಮುನ್ನಡೆಸುತ್ತಿದ್ದು, ಈ ತನಕ ಐದು ಗೋಲುಗಳನ್ನು ಗಳಿಸಿದ್ದಾರೆ. ಅಲ್ಜೀರಿಯಾ ವಿರುದ್ಧ ಹ್ಯಾಟ್ರಿಕ್ ಗೋಲು ಗಳಿಸಿ ಮಿರೊಸ್ಲಾವ್ ಕ್ಲೋಸ್ ಹಾಗೂ ಮಾರ್ಟಾ ಅವರ ವಿಶ್ವಕಪ್ ಪಂದ್ಯಾವಳಿಯ ಸಾರ್ವಕಾಲಿಕ ಶ್ರೇಷ್ಠ ಗೋಲ್ಸ್ಕೋರರ್ ದಾಖಲೆಯನ್ನು ಮುರಿದಿದ್ದರು.
ಟೂರ್ನಿ ಆರಂಭಕ್ಕೆ ಮೊದಲು ಇಂಟರ್ ಮಯಾಮಿ ಪರ ದೇಶೀಯ ಫುಟ್ಬಾಲ್ ಆಡುತ್ತಿದ್ದ ವೇಳೆ ಅವರು ಗಾಯಗೊಂಡಿದ್ದರು. ಟೂರ್ನಿ ಆರಂಭವಾದ ನಂತರ ಮೆಸ್ಸಿ ಅವರಲ್ಲಿ ಯಾವುದೇ ಫಿಟ್ನೆಸ್ ಸಮಸ್ಯೆ ಕಂಡುಬಂದಿಲ್ಲ.
Next Story




