FIFA WORLD CUP 2026 | ಸ್ವೀಡನ್ ವಿರುದ್ಧ 5-1 ಅಂತರದ ಭರ್ಜರಿ ಗೆಲುವು ಸಾಧಿಸಿದ ನೆದರ್ಲೆಂಡ್ಸ್

Photo: x.com/NST_Online
ಹ್ಯೂಸ್ಟನ್: ಫಿಫಾ ವಿಶ್ವಕಪ್ ಟೂರ್ನಿಯ ಎಫ್ ಗುಂಪಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವು ಸ್ವೀಡನ್ ವಿರುದ್ಧ 5-1 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಟೂರ್ನಿಯಲ್ಲೇ ಅತ್ಯಂತ ಪ್ರಬಲ ಸ್ಪರ್ಧೆ ಇರುವ ಎಫ್ ಗುಂಪಿನಲ್ಲಿ ನೆದರ್ಲೆಂಡ್ಸ್ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಲು ಇದು ಮಹತ್ವದ ಪಂದ್ಯವಾಗಿತ್ತು.
ಈ ಪಂದ್ಯದಲ್ಲಿ ಬ್ರಿಯಾನ್ ಬ್ರಾಬ್ಬಿ ಮತ್ತು ಕೋಡಿ ಗಪ್ಕೊ ಅವರ ಭರ್ಜರಿ ಪ್ರದರ್ಶನ ನೆದರ್ಲೆಂಡ್ಸ್ ಪಾಲಿಗೆ ವರದಾನವಾಯಿತು. ಇಬ್ಬರೂ ತಲಾ ಎರಡು ಗೋಲುಗಳನ್ನು ಗಳಿಸಿದರೆ, ಕ್ರಿಸಾನ್ಸಿಯೊ ಸಮ್ಮರ್ವಿಲ್ ಐದನೇ ಗೋಲು ಗಳಿಸಿದರು. ಸ್ವೀಡನ್ ಪರ ಅಂಥೋನಿ ಎಲಂಗಾ ಏಕೈಕ ಗೋಲು ಬಾರಿಸಿದರು.
ಟ್ಯುನೀಶಿಯಾ ವಿರುದ್ಧ 5-1 ಅಂತರದ ಗೆಲುವು ಸಾಧಿಸಿದ ಬಳಿಕ ಸ್ವೀಡನ್ ಗೆ ಹೀನಾಯ ಸೋಲಾಗಿದೆ. ಉತ್ತಮ ರ್ಯಾಂಕಿಂಗ್ ಹೊಂದಿದ್ದ ನೆದರ್ಲೆಂಡ್ಸ್ ತನ್ನ ಪ್ರಥಮ ಪಂದ್ಯದಲ್ಲಿ ಜಪಾನ್ ವಿರುದ್ಧ 2-2 ಡ್ರಾ ಸಾಧಿಸಿತ್ತು.
Next Story




