FIFA WORLD CUP 2026 |ರೊನಾಲ್ಡೊಗೆ ಆಘಾತ: ಪೋರ್ಚುಗಲ್ ವಿರುದ್ಧ ಡ್ರಾ ಮೂಲಕ ಇತಿಹಾಸ ಸೃಷ್ಟಿಸಿದ ಕಾಂಗೊ

ಕ್ರಿಸ್ಟಿಯಾನೊ ರೊನಾಲ್ಡೊ Photo: x.com/XHSports
ಹೂಸ್ಟನ್: ಫಿಫಾ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಅಭಿಯಾನ ಆರಂಭಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡ ಆರಂಭಿಕ ಪಂದ್ಯದಲ್ಲೇ ಆಘಾತ ಅನುಭವಿಸಿದೆ. ಕೆ ಗುಂಪಿನ ಮೊದಲ ಪಂದ್ಯದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ತಂಡ 1-1 ಗೋಲುಗಳ ಡ್ರಾ ಸಾಧಿಸುವ ಮೂಲಕ ವಿಶ್ವಕಪ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
ಎರಡನೇ ವಿಶ್ವಕಪ್ ಆಡುತ್ತಿರುವ ಕಾಂಗೊ ವಿಶ್ವಕಪ್ ನಲ್ಲಿ ಮೊದಲ ಗೋಲು ಗಳಿಸಿ ಸಂಭ್ರಮಿಸಿತು. ಝೈರೆ ಹೆಸರಿನಲ್ಲಿದ್ದಾಗ 1974ರಲ್ಲಿ ಕಾಂಗೊ ವಿಶ್ವಕಪ್ ಆಡಿತ್ತು. ಬುಧವಾರ ರಾತ್ರಿ ಪಂದ್ಯದುದ್ದಕ್ಕೂ ಪೋರ್ಚುಗಲ್ ಪ್ರಾಬಲ್ಯ ಸ್ಥಾಪಿಸಿದರೂ, ಅವಕಾಶಗಳನ್ನುಗೋಲುಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲವಾಗಿ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡಿತು.
ಜಾವೊ ನೆವೇಸ್ ಆರನೇ ನಿಮಿಷದಲ್ಲೇ ಗಳಿಸಿದ ಗೋಲಿನಿಂದ ಈ ಪೋರ್ಚುಗಲ್ ತಂಡ ಉತ್ತಮ ಆರಂಭ ಗಳಿಸಿತು. ಪೆಡ್ರೊ ನೆಟೊ ಪಾಸ್ ನ್ನು ನೆವೇಸ್ ಸುಲಲಿತವಾಗಿ ನೆಟ್ ದಾಟಿಸಿ ಮೊದಲ ಮುನ್ನಡೆ ತಂದುಕೊಟ್ಟರು.
ಈ ಹಂತದಲ್ಲಿ ಗೋಲು ಸಮಬಲಗೊಳಿಸಲು ಕಾಂಗೊ ನಿರಂತರ ಪ್ರಯತ್ನ ನಡೆಸಿ, ಪೋರ್ಚುಗಲ್ ರಕ್ಷಣಾ ಗೋಡೆಗೆ ಸವಾಲು ಹಾಕಿದರು.
ವಿಸ್ಸಾ ಅವರ ಗೋಲಿನ ಮೂಲಕ ಅರ್ಧವಿರಾಮಕ್ಕಿಂತ ಮುನ್ನ ಕಾಂಗೋ 1-1 ಸಮಬಲ ಸಾಧಿಸಿತು.
ಆಘಾತಕ್ಕೀಡಾದ ಪೋರ್ಚುಗಲ್ ದ್ವಿತೀರ್ಯಾಧದಲ್ಲಿ ಗಮನಾರ್ಹ ಪ್ರದರ್ಶನ ನೀಡಿತು. ರೊನಾಲ್ಡೊ ಎರಡು ಗೋಲು ಗಳಿಸುವ ಅವಕಾಶ ಪಡೆದರೂ, ಅದನ್ನು ಪರಿವರ್ತಿಸುಲ್ಲಿ ವಿಫಲರಾದರು.
ಪೋರ್ಚುಗಲ್ 1 ನೇರ ಗುರಿಯೊಂದಿಗೆ 7 ಬಾರಿ ಗೋಲು ಪ್ರಯತ್ನ ನಡೆಸಿದರೆ , ಕಾಂಗೊ 2 ನೇರ ಗುರಿಯೊಂದಿಗೆ 8 ಬಾರಿ ಗೋಲು ಪ್ರಯತ್ನ ನಡೆಸಿತು.






