FIFA World Cup 2026 | ನಾಕೌಟ್ ಹಂತಕ್ಕೆ ಮುನ್ನಡೆದ ಹಾಲಿ ಚಾಂಪಿಯನ್ ತಂಡ

Photo: x.com/The_Japan_News
ಡಲ್ಲಾಸ್ : ಫಿಫಾ ವಿಶ್ವಕಪ್ ಪಂದ್ಯಾವಳಿಯ ಜೆ ಗುಂಪಿನ ಪಂದ್ಯದಲ್ಲಿ ಸೋಮವಾರ ಆಸ್ಟ್ರಿಯಾ ವಿರುದ್ಧ 2-0 ಗೋಲುಗಳ ಜಯ ಸಾಧಿಸಿದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಅಂತಿಮ 32ರ ಹಂತಕ್ಕೆ ಮುನ್ನಡೆಯಿತು.
ಆಟದ 38ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದ ಮೆಸ್ಸಿ, ಕೊನೆಯ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಇದಕ್ಕೂ ಮುನ್ನ ಖ್ಯಾತ ಆಟಗಾರ ಪೆನಾಲ್ಟಿ ಗೋಲು ಗಳಿಸುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು.
ಮೊದಲ ಹೊಡೆತವನ್ನು ತಡೆದ ಬಳಿಕ ಮೆಸ್ಸಿ ರಿಬೌಂಡ್ ಆಗಿ ಚೆಂಡು ಪಡೆದು, ಗೋಲುಪೆಟ್ಟಿಗೆಗೆ ಸೇರಿಸುವ ಮೂಲಕ ಪಂದ್ಯದಲ್ಲಿ ಎರಡನೇ ಗೋಲು ಬಾರಿಸಿದರು. ಪ್ರಸಕ್ತ ವಿಶ್ವಕಪ್ನಲ್ಲಿ ಎರಡು ಪಂದ್ಯಗಳಿಂದ ಮೆಸ್ಸಿ 5 ಗೋಲು ಹೊಡೆದಿದ್ದಾರೆ. ಇದು ಅರ್ಜೆಂಟೀನಾದ ದಂತಕಥೆ ಎನಿಸಿದ ಆಟಗಾರನಿಗೆ ಪ್ರಸಕ್ತ ವಿಶ್ವಕಪ್ನಲ್ಲಿ ನಂಬಲಸಾಧ್ಯ ಆರಂಭವಾಗಿದೆ.
Next Story




