2026ರ ಫಿಫಾ ವಿಶ್ವಕಪ್ ನಲ್ಲಿ 3 ನಿಮಿಷಗಳ ನೀರು ಕುಡಿಯುವ ವಿರಾಮ

Photo Credit : ddnews.gov.in
ಹೊಸದಿಲ್ಲಿ, ಡಿ. 9: 2026ರ ಪುರುಷರ ಫುಟ್ಬಾಲ್ ವಿಶ್ವಕಪ್ ನಿಯಮಗಳಿಗೆ ಫುಟ್ಬಾಲ್ ನ ಜಾಗತಿಕ ಆಡಳಿತ ಮಂಡಳಿ ಫಿಫಾ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಪ್ರತಿಯೊಂದು ಪಂದ್ಯದ ಪ್ರತಿ ಅರ್ಧದಲ್ಲಿ ಕಡ್ಡಾಯ ಮೂರು ನಿಮಿಷಗಳ ನೀರು ಕುಡಿಯುವ ವಿರಾಮ ಇರುತ್ತದೆ. ಹವಾಮಾನ ಪರಿಸ್ಥಿತಿ ಏನೇ ಇದ್ದರೂ, ಸ್ಥಳ ಅಥವಾ ಸ್ಟೇಡಿಯಮ್ ತಂತ್ರಜ್ಞಾನ ಯಾವುದೇ ಇದ್ದರೂ ಈ ನಿಯಮ ಅನ್ವಯಿಸುತ್ತದೆ.
ಮುಂದಿನ ವರ್ಷದಿಂದ, ಆಟಗಾರರು ನೀರು ಕುಡಿಯಲು ಮತ್ತು ದಣಿವಾರಿಸಲು ಸಾಧ್ಯವಾಗುವಂತೆ ಪಂದ್ಯವೊಂದರ ಪ್ರತಿ ಅರ್ಧದ 22ನೇ ನಿಮಿಷದಲ್ಲಿ ರೆಫರಿಗಳು ಆಟವನ್ನು ನಿಲ್ಲಿಸುತ್ತಾರೆ. ಈ ನಿಯಮವು ಮೇಲ್ಛಾವಣಿ ಇರುವ ಸ್ಟೇಡಿಯಮ್ ಗಳು ಮತ್ತು ಸುಧಾರಿತ ಹವಾನಿಯಂತ್ರಣ ವ್ಯವಸ್ಥೆಗಳಿರುವ ಸ್ಟೇಡಿಯಮ್ ಗಳಿಗೂ ಅನ್ವಯಿಸುತ್ತವೆ.
2026ರ ಫಿಫಾ ವಿಶ್ವಕಪ್ ಅಮೆರಿಕ, ಕೆನಡ ಮತ್ತು ಮೆಕ್ಸಿಕೊ ದೇಶಗಳಲ್ಲಿ ಜಂಟಿಯಾಗಿ ನಡೆಯಲಿದೆ.
Next Story





