FIFA ವಿಶ್ವಕಪ್: ಉಜ್ಬೇಕಿಸ್ತಾನ್ ವಿರುದ್ಧ ಕೊಲಂಬಿಯಾಕ್ಕೆ 3-1 ಅಂತರದ ಗೆಲುವು

Photo Credit : AP , PTI
ಮೆಕ್ಸಿಕೋ : ಗ್ರೂಪ್ ಕೆ ಪಂದ್ಯದಲ್ಲಿ ಕೊಲಂಬಿಯಾ ತಂಡವು ಚೊಚ್ಚಲ ಬಾರಿಗೆ ವಿಶ್ವಕಪ್ ಪ್ರವೇಶಿಸಿರುವ ಉಜ್ಬೇಕಿಸ್ತಾನ್ ವಿರುದ್ಧ 3-1 ಅಂತರದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ವಿಶ್ವಕಪ್ ನ ಎಲ್ಲಾ 48 ತಂಡಗಳು ಕಣಕ್ಕಿಳಿದಂತಾಗಿದೆ.
ಕೊಲಂಬಿಯಾ ಪರ ಡೇನಿಯಲ್ ಮುನೋಜ್ (40ನೇ ನಿಮಿಷ), ಲೂಯಿಸ್ ಡಯಾಸ್ (65ನೇ ನಿಮಿಷ ), ಜಮಿಂಟನ್ ಕ್ಯಾಂಪಾಝ್ ( 90'+9' ನಿಮಿಷ) ಗೋಲು ಗಳಿಸಿದರೆ , ಉಜ್ಬೇಕಿಸ್ತಾನ್ ಪರ ಅಬ್ಬೋಸ್ಬೆಕ್ ಫೈಜುಲ್ಲೇವ್ (60ನೇ ನಿಮಿಷ ) ಗೋಲು ಗಳಿಸಿದರು .
3 ನೇರ ಗುರಿಯೊಂದಿಗೆ 9 ಬಾರಿ ಗೋಲು ಪ್ರಯತ್ನ ನಡೆಸುವ ಮೂಲಕ ಉಜ್ಬೇಕಿಸ್ತಾನ್ ಮೊದಲ ಪಂದ್ಯದಲ್ಲಿಯೇ ಪ್ರಬಲ ಪೈಪೋಟಿ ನೀಡಿತು. ಕೊಲಂಬಿಯಾ 4 ನೇರ ಗುರಿಯೊಂದಿಗೆ 15 ಬಾರಿ ಗೋಲು ಪ್ರಯತ್ನ ನಡೆಸಿತು.
Next Story




