ಭಾರತ-ಶ್ರೀಲಂಕಾ ಪಂದ್ಯದ ಬಳಿಕ ಸ್ಟೇಡಿಯಮ್‍ನಲ್ಲಿ ಅಭಿಮಾನಿಗಳ ನಡುವೆ ಹೊಡೆದಾಟ

ಕೊಲಂಬೊ: ಮಂಗಳವಾರ ನಡೆದ ಏಶ್ಯ ಕಪ್ ಸೂಪರ್ 4 ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು 41 ರನ್‍ಗಳಿಂದ ಸೋಲಿಸಿದ ಬಳಿಕ, ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಮ್‍ನಲ್ಲಿ ಅಭಿಮಾನಿಗಳ ನಡುವೆ ಹೊಡೆದಾಟ ಸಂಭವಿಸಿದೆ. ಓರ್ವ ಶ್ರೀಲಂಕಾ ವ್ಯಕ್ತಿಯು ಇನ್ನೋರ್ವ ಪ್ರೇಕ್ಷಕನಿಗೆ ಮುಷ್ಟಿಯಿಂದ ಹೊಡೆಯುವುದನ್ನು ವೀಡಿಯೊವೊಂದು ತೋರಿಸಿದೆ. ಹೊಡೆತ ತಿಂದ ವ್ಯಕ್ತಿಯೂ ಪ್ರತಿಯಾಗಿ ಹೊಡೆಯುವನ್ನು ಕಾಣಬಹುದಾಗಿದೆ.
ಈ ಗದ್ದಲದ ನಡುವೆ, ಓರ್ವ ಮಹಿಳಾ ಪೊಲೀಸ್ ಅಧಿಕಾರಿ ಕ್ರಿಕೆಟ್ ಅಭಿಮಾನಿಗಳ ಸಣ್ಣ ಗುಂಪೊಂದನ್ನು ಉದ್ದೇಶಿಸಿ ಮಾತನಾಡುವುದನ್ನು ಕಾಣಬಹುದಾಗಿದೆ.
ಇಬ್ಬರು ಕ್ರಿಕೆಟ್ ಅಭಿಮಾನಿಗಳ ನಡುವಿನ ಜಗಳಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಘಟನೆ ನಡೆದಾಗ ಪ್ರೇಕ್ಷಕರ ಗ್ಯಾಲರಿ ಖಾಲಿಯಾಗಿತ್ತು. ಹಾಗಾಗಿ, ಪಂದ್ಯ ಮುಗಿದ ಬಳಿಕ ಹೊಡೆದಾಟ ನಡೆದಿರುವಂತೆ ಕಾಣುತ್ತದೆ. ಸ್ಥಳದಲ್ಲಿದ್ದ ಇತರರು ಹೊಡೆದಾಟದಲ್ಲಿ ತೊಡಗಿದವರನ್ನು ಪ್ರತ್ಯೇಕಿಸಿದ್ದಾರೆ ಎಂದು ವರದಿಯಾಗಿದೆ.
ಆ ಪಂದ್ಯದಲ್ಲಿ, ಕುಲದೀಪ್ ಯಾದವ್ ಪಡೆದ ನಾಲ್ಕು ವಿಕೆಟ್‍ಗಳ ನೆರವಿನಿಂದ ಭಾರತವು ಶ್ರೀಲಂಕಾವನ್ನು 41 ರನ್‍ಗಳ ಅಂತರದಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 213 ರನ್‍ಗಳನ್ನು ಗಳಿಸಿತು. ಬಳಿಕ ಶ್ರೀಲಂಕ 172 ರನ್‍ಗಳಿಗೆ ತನ್ನ ಆಟ ಮುಗಿಸಿತು.







