ಯುರೋಪ್ನಲ್ಲಿ ಎಫ್ಐಎಚ್ ಪ್ರೊ ಲೀಗ್ 2024-25 | ಭಾರತೀಯ ಮಹಿಳೆಯರ ಹಾಕಿ ತಂಡ ಪ್ರಕಟ

PC : sportstar.thehindu.com
ಹೊಸದಿಲ್ಲಿ: ಯುರೋಪ್ನಲ್ಲಿ ನಡೆಯಲಿರುವ 2024-25ರ ಆವೃತ್ತಿಯ ಎಫ್ಐಎಚ್ ಪ್ರೊ ಲೀಗ್ ಟೂರ್ನಿಗೆ ಭಾರತವು 24 ಸದಸ್ಯರನ್ನು ಒಳಗೊಂಡ ಮಹಿಳೆಯರ ಹಾಕಿ ತಂಡವನ್ನು ಸೋಮವಾರ ಪ್ರಕಟಿಸಿದೆ.
ಮಿಡ್ ಫೀಲ್ಡರ್ ಸಲಿಮಾ ಟೇಟೆ ತಂಡದ ನಾಯಕತ್ವವಹಿಸಿದ್ದು, ಫಾರ್ವರ್ಡ್ ಆಟಗಾರ್ತಿ ನವನೀತ್ ಕೌರ್ ಉಪ ನಾಯಕಿಯಾಗಿದ್ದಾರೆ.
ಜೂನ್ 14ರಿಂದ 29ರ ತನಕ ಯುರೋಪ್ನಲ್ಲಿ ಎಫ್ಐಎಚ್ ಪ್ರೊ ಲೀಗ್ ನಡೆಯಲಿದೆ. ಪಂದ್ಯಗಳು ಲಂಡನ್, ಆಂಟ್ವೆರ್ಪ್ ಹಾಗೂ ಬರ್ಲಿನ್ನಲ್ಲಿ ನಡೆಯಲಿದೆ.
ಭಾರತದ ಹಾಕಿ ತಂಡವು ಆಸ್ಟ್ರೇಲಿಯ, ಅರ್ಜೆಂಟೀನ, ಬೆಲ್ಜಿಯಮ್, ಚೀನಾ ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ.
2024-25ರ ಆವೃತ್ತಿಯ ಮಹಿಳೆಯರ ಎಫ್ಐಎಚ್ ಪ್ರೊ ಲೀಗ್ ವಿಜೇತರು ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ನಲ್ಲಿ ನೇರ ಪ್ರವೇಶ ಪಡೆಯಲಿದ್ದಾರೆ.
ಫೆಬ್ರವರಿಯಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ಭಾರತವು 8 ಪಂದ್ಯಗಳನ್ನು ಆಡಿತ್ತು. 2ರಲ್ಲಿ ಜಯ ಹಾಗೂ 2ರಲ್ಲಿ ಡ್ರಾ ಸಾಧಿಸಿತ್ತು. ಒಟ್ಟು 9 ಅಂಕಗಳನ್ನು ಗಳಿಸಿರುವ ಭಾರತವು 9 ತಂಡಗಳ ಪೈಕಿ 6ನೇ ಸ್ಥಾನದಲ್ಲಿದೆ.
ಕೊನೆಯ ಸ್ಥಾನ ಪಡೆಯುವ ತಂಡವು 2025-26ರ ಎಫ್ಎಎಚ್ ನೇಶನ್ಸ್ ಕಪ್ನಲ್ಲಿ ಭಾಗವಹಿಸಲಿದೆ.
ಭಾರತದ ಮಹಿಳಾ ಹಾಕಿ ತಂಡ
ಗೋಲ್ಕೀಪರ್ಗಳು: ಸವಿತಾ, ಬಿಚು ದೇವಿ ಖರಿಬಮ್
ಡಿಫೆಂಡರ್ಗಳು: ಸುಶೀಲಾ ಚಾನು, ಜ್ಯೋತಿ, ಸುಮನ್ ದೇವಿ, ಜ್ಯೋತಿ ಸಿಂಗ್, ಇಶಿಕಾ ಚೌಧರಿ, ಜ್ಯೋತಿ ಛತ್ರಿ.
ಮಿಡ್ ಫೀಲ್ಡರ್ಗಳು: ಸಲಿಮಾ ಟೇಟೆ(ನಾಯಕಿ), ವೈಷ್ಣವಿ ವಿಠಲ್ ಫಾಲ್ಕೆ, ಸುಜಾತಾ ಕುಜುರ್, ಮನಿಶಾ ಚೌಹಾಣ್, ನೇಹಾ,ಲಾಲ್ರೆಂಸಿಯಾಮಿ, ಶರ್ಮಿಳಾ ದೇವಿ, ಸುನೆಲಿತಾ ಟೊಪ್ಪೊ, ಮಹಿಮಾ ಟೇಟೆ.
ಫಾರ್ವರ್ಡ್ಗಳು: ನವನೀತ್ ಕೌರ್(ನಾಯಕಿ), ದೀಪಿಕಾ, ದೀಪಿಕಾ ಸೊರೆಂಗ, ಬಲಜೀತ್ ಕೌರ್, ಋತುಜಾ ದಾದಾಸೊ ಪಿಸಾಲ್, ಬ್ಯೂಟಿ ಡಂಗ್ಡಂಗ್, ಸಾಕ್ಷಿ ರಾಣಾ.
ಮೀಸಲು ಆಟಗಾರ್ತಿಯರು: ಗೋಲ್ಕೀಪರ್ ಬನ್ಸಾರಿ ಸೋಲಂಕಿ, ಡಿಫೆಂಡರ್ ಅಜ್ಮಿನಾ ಕುಜುರ್.
ವೇಳಾಪಟ್ಟಿ
ಜೂನ್ 14: ಭಾರತ-ಆಸ್ಟ್ರೇಲಿಯ-ಲಂಡನ್-ಮಧ್ಯಾಹ್ನ 3:30
ಜೂನ್ 15: ಭಾರತ-ಆಸ್ಟ್ರೇಲಿಯ-ಲಂಡನ್-ಮಧ್ಯಾಹ್ನ 3:00
ಜೂನ್ 17: ಭಾರತ-ಅರ್ಜೆಂಟೀನ-ಲಂಡನ್-ರಾತ್ರಿ 8:00
ಜೂನ್ 18: ಭಾರತ-ಅರ್ಜೆಂಟೀನ-ಲಂಡನ್-ರಾತ್ರಿ 8:00
ಜೂನ್ 21: ಭಾರತ-ಬೆಲ್ಜಿಯಮ್-ಆಂಟ್ವರ್ಪ್-ಸಂಜೆ 4:30
ಜೂನ್ 22: ಭಾರತ-ಬೆಲ್ಜಿಯಮ್-ಆಂಟ್ವರ್ಪ್-ಸಂಜೆ 4:30
ಜೂನ್ 28: ಭಾರತ-ಚೀನಾ-ಬರ್ಲಿನ್-ಸಂಜೆ 5:30
ಜೂನ್ 29: ಭಾರತ-ಚೀನಾ-ಬರ್ಲಿನ್-ರಾತ್ರಿ 8
*ಸಮಯ: ಭಾರತೀಯ ಕಾಲಮಾನ







