ಎಫ್ಐಎಚ್ ಪ್ರೊ ಲೀಗ್ 2024-25 | ಎಲ್ಲ ಪಂದ್ಯಗಳಿಗೆ ಉಚಿತ ಟಿಕೆಟ್ ಘೋಷಿಸಿದ ಹಾಕಿ ಇಂಡಿಯಾ

Photo Credit ; hockeyindia.org
ಚೆನ್ನೈ: ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಫೆಬ್ರವರಿ 15ರಿಂದ 25ರ ತನಕ ನಡೆಯಲಿರುವ ಎಫ್ಐಎಚ್ ಹಾಕಿ ಪ್ರೊ ಲೀಗ್ 2024-25ರ ಪಂದ್ಯಗಳಿಗೆ ಎಲ್ಲ ಹಾಕಿ ಅಭಿಮಾನಿಗಳಿಗೆ ಹಾಕಿ ಇಂಡಿಯಾವು ಉಚಿತ ಪ್ರವೇಶವನ್ನು ಪ್ರಕಟಿಸಿದೆ.
ಭುವನೇಶ್ವರದಲ್ಲಿ ನಡೆಯಲಿರುವ ಪ್ರೊ ಲೀಗ್ನಲ್ಲಿ ಭಾರತ, ಇಂಗ್ಲೆಂಡ್, ಸ್ಪೇನ್, ಜರ್ಮನಿ ಹಾಗೂ ಐರ್ಲ್ಯಾಂಡ್ನ ಪುರುಷರ ಅಗ್ರ ತಂಡಗಳು ಭಾಗವಹಿಸಲಿವೆ. ಮಹಿಳೆಯರ ಸ್ಪರ್ಧಾವಳಿಯಲ್ಲಿ ಭಾರತ ತಂಡವು ಜರ್ಮನಿ, ಇಂಗ್ಲೆಂಡ್, ನೆದರ್ಲ್ಯಾಂಡ್ಸ್ ಹಾಗೂ ಸ್ಪೇನ್ ತಂಡಗಳನ್ನು ಎದುರಿಸಲಿದೆ. ಪ್ರತೀ ತಂಡಗಳು ಎರಡು ಬಾರಿ ಆಡಲಿವೆ.
ಫೆಬ್ರವರಿ 15ರಂದು ಭಾರತ ಹಾಕಿ ತಂಡಗಳ ಅಭಿಯಾನ ಆರಂಭವಾಗಲಿದೆ. ಮಹಿಳೆಯರ ಹಾಕಿ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆ ನಂತರ ಪುರುಷರ ಹಾಕಿ ತಂಡವು ಸ್ಪೇನ್ ತಂಡವನ್ನು ಮುಖಾಮುಖಿಯಾಗಲಿದೆ.
Next Story