ಎಫ್ಐಎಚ್ ಪ್ರೊ ಲೀಗ್ | ಭಾರತದ ಪುರುಷರ ಹಾಕಿ ತಂಡ ಪ್ರಕಟ

Photo: PTI
ಹೊಸದಿಲ್ಲಿ: ಯುರೋಪ್ ನಲ್ಲಿ ನಡೆಯಲಿರುವ 2024-25ನೇ ಆವೃತ್ತಿಯ ಎಫ್ಐಎಚ್ ಪ್ರೊ ಲೀಗ್ ಗಾಗಿ 24 ಸದಸ್ಯರನ್ನು ಒಳಗೊಂಡ ಭಾರತದ ಪುರುಷರ ಹಾಕಿ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ.
ಜೂನ್ 7ರಿಂದ 22ರ ತನಕ ಯುರೋಪ್ ನಲ್ಲಿ ಎಫ್ಐಎಚ್ ಪ್ರೊ ಲೀಗ್ ಟೂರ್ನಿ ನಡೆಯಲಿದ್ದು, ಆಮ್ ಸ್ಟೆಲ್ವೀನ್, ನೆದರ್ಲ್ಯಾಂಡ್ಸ್ ,ಆಂಟ್ವರ್ಪ್ ಹಾಗೂ ಬೆಲ್ಜಿಯಮ್ ನಲ್ಲಿ ಪಂದ್ಯ ಆಯೋಜಿಸಲಾಗಿದೆ.
ಭಾರತದ ಹಾಕಿ ತಂಡವು ನೆದರ್ಲ್ಯಾಂಡ್ಸ್, ಅರ್ಜೆಂಟೀನ, ಆಸ್ಟ್ರೇಲಿಯ ಹಾಗೂ ಬೆಲ್ಜಿಯಮ್ ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ.
ಡಿಫೆಂಡರ್ ಹರ್ಮನ್ಪ್ರೀತ್ ಸಿಂಗ್ ನಾಯಕನಾಗಿ ಹಾಗೂ ಮಿಡ್ ಫೀಲ್ಡರ್ ಹಾರ್ದಿಕ್ ಸಿಂಗ್ ಉಪ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪುರುಷರ ಎಫ್ಐಎಚ್ ಪ್ರೊ ಲೀಗ್-2024-25ರಲ್ಲಿ ಜಯಶಾಲಿಯಾಗುವ ತಂಡವು ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ನೇರ ಪ್ರವೇಶ ಪಡೆಯಲಿದೆ.
ಫೆಬ್ರವರಿಯಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತವು 8 ಪಂದ್ಯಗಳನ್ನು ಆಡಿದ್ದು, 5ರಲ್ಲಿ ಜಯ ಸಾಧಿಸಿ, 15 ಅಂಕ ಗಳಿಸಿ ಸದ್ಯ 3ನೇ ಸ್ಥಾನದಲ್ಲಿದೆ.
*ಭಾರತದ ಹಾಕಿ ತಂಡ
*ಗೋಲ್ಕೀಪರ್ಗಳು: ಕೃಷ್ಣ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರ
*ಡಿಫೆಂಡರ್ಗಳು: ಸುಮಿತ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ನೀಲಂ ಸಂಜೀಪ್, ಹರ್ಮನ್ಪ್ರೀತ್ ಸಿಂಗ್, ಜರ್ಮನ್ಪ್ರೀತ್ ಸಿಂಗ್, ಸಂಜಯ್, ಯಶ್ದೀಪ್.
*ಮಿಡ್ ಫೀಲ್ಡರ್ ಗಳು: ರಾಜ್ ಕುಮಾರ್ ಪಾಲ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ರಾಜಿಂದರ್ ಸಿಂಗ್, ಮನ್ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್.
*ಫಾರ್ವರ್ಡ್ಗಳು: ಗುರ್ಜಂತ್ ಸಿಂಗ್, ಅಭಿಷೇಕ್, ಶೀಲಾನಂದ ಲಾಕ್ರಾ, ಮನ್ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ದಿಲ್ ಪ್ರೀತ್ ಸಿಂಗ್, ಸುಖಜೀತ್ ಸಿಂಗ್.
ವೇಳಾಪಟ್ಟಿ
ಜೂನ್ 7: ಭಾರತ-ನೆದರ್ಲ್ಯಾಂಡ್ಸ್
ಜೂನ್ 9: ಭಾರತ-ನೆದರ್ಲ್ಯಾಂಡ್ಸ್
ಜೂನ್ 11: ಭಾರತ-ಅರ್ಜೆಂಟೀನ
ಜೂನ್ 12: ಭಾರತ-ಅರ್ಜೆಂಟೀನ
ಜೂನ್ 14: ಭಾರತ-ಆಸ್ಟ್ರೇಲಿಯ
ಜೂನ್ 15: ಭಾರತ-ಆಸ್ಟ್ರೇಲಿಯ
ಜೂನ್ 21: ಭಾರತ-ಬೆಲ್ಜಿಯಮ್
ಜೂನ್ 22: ಭಾರತ-ಬೆಲ್ಜಿಯಮ್







