ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್: 189 ರನ್ ಗೆ ಆಲೌಟಾದ ಭಾರತ

PC | X@ProteasMenCSA
ಕೋಲ್ಕತಾ : ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟೆಸ್ಟ್ ನ ಎರಡನೇ ದಿನದಾಟದಲ್ಲಿ ಭಾರತ ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 189 ರನ್ ಗೆ ಆಲೌಟ್ ಆಗಿದೆ.
ಊಟದ ವಿರಾಮದ ವೇಳೆಗೆ 138-4 ವಿಕೆಟ್ ಕಳೆದುಕೊಂಡಿದ್ದ ಭಾರತ, ದ್ವಿತೀಯ ಸೆಷನ್ನಲ್ಲಿ ದಿಢೀರ್ ಕುಸಿತ ಅನುಭವಿಸಿತು.
ದಕ್ಷಿಣ ಆಫ್ರಿಕಾ ಪರ ಬೌಲಿಂಗ್ ದಾಳಿ ನಡೆಸಿದ ಸೈಮನ್ ಹಾರ್ಮರ್ 4 ವಿಕೆಟ್ ಪಡೆದರೆ, ಮಾರ್ಕೋ ಜಾನ್ಸನ್ 3 ವಿಕೆಟ್ಗಳನ್ನು ಪಡೆದರು.
Next Story





