ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶಕ್ಕೆ 400 ರನ್

Photo Credit : PTI
ಜೋಹಾನ್ಸ್ಬರ್ಗ್: ತೌಹೀದ್(137 ರನ್, 227 ಎಸೆತ)ಹಾಗೂ ಲಿಟನ್ ದಾಸ್(120 ರನ್, 179 ಎಸೆತ)ಶತಕದ ಸಹಾಯದಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತನ್ನ ಮೊದಲ ಇನಿಂಗ್ಸ್ನಲ್ಲಿ 400 ರನ್ ಗಳಿಸಿ ಆಲೌಟಾಗಿದೆ.
ಬಾಂಗ್ಲಾ ತಂಡವು 9 ಓವರ್ಗಳಲ್ಲಿ 22 ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡಿತು. ಆಗ ತೌಹೀದ್ ಹಾಗೂ ತಂಝೀದ್ ಹಸನ್(67 ರನ್, 108 ಎಸೆತ) 99 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ಹಸನ್ ಹಾಗೂ ಮುಶ್ಫಿಕುರ್ರಹೀಂ ಬೆನ್ನುಬೆನ್ನಿಗೆ ಔಟಾದಾಗ ಬಾಂಗ್ಲಾದೇಶ 121 ರನ್ಗೆ ಐದು ವಿಕೆಟ್ ಕಳೆದುಕೊಂಡಿತು.
ಆಗ ಜೊತೆಯಾದ ತೌಹೀದ್ ಹಾಗೂ ದಾಸ್ ಅರನೇ ವಿಕೆಟ್ಗೆ 206 ರನ್ ಜೊತೆಯಾಟ ನಡೆಸಿ ಇನಿಂಗ್ಸ್ಗೆ ಆಸರೆಯಾದರು. ತೌಹೀದ್ ಏಳು ಇನಿಂಗ್ಸ್ಗಳಲ್ಲಿ ತನ್ನ ಎರಡನೇ ಶತಕ ಗಳಿಸಿದರು. ದಾಸ್ ತನ್ನ ಎಂಟನೇ ಶತಕವನ್ನು ಪೂರೈಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಶತಕ ಗಳಿಸಿದ ಬಾಂಗ್ಲಾದೇಶದ ಮೂರನೇ ಬ್ಯಾಟರ್ ಎನಿಸಿಕೊಂಡರು.
ದಾಸ್ ಹಾಗೂ ತೌಹೀದ್ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡವು ಸೋಮವಾರ ಭೋಜನ ವಿರಾಮಕ್ಕೆ ಮೊದಲೇ ಬಾಂಗ್ಲಾದೇಶವನ್ನು 400 ರನ್ಗೆ ನಿಯಂತ್ರಿಸಿತು. ಕಾಗಿಸೊ ರಬಾಡ(5-51) ಹಾಗೂ ಪ್ಯಾಟರ್ಸನ್(4-92)ಒಂಭತ್ತು ವಿಕೆಟ್ಗಳನ್ನು ಹಂಚಿಕೊಂಡರು.






