ಮೊದಲ ಟೆಸ್ಟ್: ಭಾರತ ವಿರುದ್ಧ ಇಂಗ್ಲೆಂಡ್ ಜಯಭೇರಿ
► ಡಕೆಟ್-ಕ್ರಾಲಿ ಭರ್ಜರಿ ಬ್ಯಾಟಿಂಗ್

PC | X
ಲೀಡ್ಸ್, ಜೂ.24: ಆರಂಭಿಕ ಆಟಗಾರರಾದ ಬೆನ್ ಡಕೆಟ್(149 ರನ್, 170 ಎಸೆತ, 21 ಬೌಂಡರಿ, 1 ಸಿಕ್ಸರ್)ಹಾಗೂ ಝ್ಯಾಕ್ ಕ್ರಾಲಿ(65 ರನ್, 126 ಎಸೆತ, 7 ಬೌಂಡರಿ)ಭರ್ಜರಿ ಆರಂಭ, ಜೋ ರೂಟ್ ಜವಾಬ್ದಾರಿಯುತ ಬ್ಯಾಟಿಂಗ್(ಔಟಾಗದೆ 53, 84 ಎಸೆತ, 6 ಬೌಂಡರಿ) ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಭಾರತ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 5 ವಿಕೆಟ್ ಅಂತರದಿಂದ ಗೆದ್ದುಕೊಂಡಿದೆ.
ಗೆಲ್ಲಲು 371 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 82 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 373 ರನ್ ಗಳಿಸಿದೆ. ಜೋ ರೂಟ್(53 ರನ್, 84 ಎಸೆತ, 6 ಬೌಂಡರಿ)ಹಾಗೂ ಜೇಮೀ ಸ್ಮಿತ್(ಔಟಾಗದೆ 44, 55 ಎಸೆತ, 4 ಬೌಂಡರಿ, 2 ಸಿಕ್ಸರ್) 6ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 88 ಎಸೆತಗಳಲ್ಲಿ 71 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
4ನೇ ಇನಿಂಗ್ಸ್ನಲ್ಲಿ 371 ರನ್ ಗುರಿ ಬೆನ್ನಟ್ಟುವ ಮೂಲಕ ಇಂಗ್ಲೆಂಡ್ ಮಹತ್ವದ ಸಾಧನೆ ಮಾಡಿತು. ಭಾರತ ಎರಡೂ ಇನಿಂಗ್ಸ್ಗಳಲ್ಲಿ ಒಟ್ಟು 5 ಶತಕಗಳನ್ನು ಸಿಡಿಸಿ 800ಕ್ಕೂ ಅಧಿಕ ರನ್ ಗಳಿಸಿದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಪಂತ್ ಅವರು ಎರಡೂ ಇನಿಂಗ್ಸ್ಗಳಲ್ಲಿ ಶತಕ ಸಿಡಿಸಿದ್ದು ವ್ಯರ್ಥವಾಯಿತು.
ಶತಕವೀರ ಬೆನ್ ಡಕೆಟ್ ಹಾಗೂ ಹ್ಯಾರಿ ಬ್ರೂಕ್ ಅವರು ಶಾರ್ದುಲ್ ಠಾಕೂರ್ ಬೌಲಿಂಗ್ನಲ್ಲಿ ಸತತ ಎಸೆತಗಳಲ್ಲಿ ಔಟಾದರು. ಆಗ 5ನೇ ವಿಕೆಟ್ಗೆ 49 ರನ್ ಸೇರಿಸಿ ರೂಟ್ ಹಾಗೂ ನಾಯಕ ಬೆನ್ ಸ್ಟೋಕ್ಸ್(33 ರನ್, 51 ಎಸೆತ) ತಂಡವನ್ನು ಆಧರಿಸಿದರು.
ಇದಕ್ಕೂ ಮೊದಲು ವಿಕೆಟ್ ನಷ್ಟವಿಲ್ಲದೆ 21 ರನ್ನಿಂದ 5ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಕ್ರಾಲಿ ಹಾಗೂ ಡಕೆಟ್ ಭರ್ಜರಿ ಆರಂಭ ಒದಗಿಸಿದರು. ಡಕೆಟ್ ಹಾಗೂ ಕ್ರಾಲಿ 4ನೇ ಬಾರಿ ಶತಕದ ಜೊತೆಯಾಟ ನಡೆಸಿದರು. 2000ರ ನಂತರ ಮೊದಲ ಬಾರಿ ಈ ಸಾಧನೆ ಮಾಡಿದ ಇಂಗ್ಲೆಂಡ್ ಓಪನರ್ ಎನಿಸಿಕೊಂಡರು. ಅಲಿಸ್ಟರ್ ಕುಕ್ ಹಾಗೂ ಆಂಡ್ರೂ ಸ್ಟ್ರಾಸ್ ಈ ಸಾಧನೆ ಮಾಡಿದ್ದರು.
ಈ ಜೋಡಿ 256 ಎಸೆತಗಳಲ್ಲಿ 188 ರನ್ ಜೊತೆಯಾಟ ನಡೆಸಿತು. ಕ್ರಾಲಿ ಹಾಗೂ ಓಲಿ ಪೋಪ್(8 ರನ್)ಬೆನ್ನುಬೆನ್ನಿಗೆ ಔಟಾದರು. ಈ ಇಬ್ಬರನ್ನು ಕನ್ನಡಿಗ ಪ್ರಸಿದ್ಧ ಕೃಷ್ಣ ಪೆವಿಲಿಯನ್ಗೆ ಕಳುಹಿಸಿದರು.
ಡಕೆಟ್ ಹಾಗೂ ರೂಟ್ 3ನೇ ವಿಕೆಟ್ಗೆ 59 ಎಸೆತಗಳಲ್ಲಿ 47 ರನ್ ಸೇರಿಸಿದರು. ಕೊನೆಗೂ ಶಾರ್ದುಲ್ ಅವರು ಡಕೆಟ್ ವಿಕೆಟನ್ನು ಉರುಳಿಸಿದರು.
ಪ್ರಸಿದ್ಧ ಕೃಷ್ಣ(2-92)ಹಾಗೂ ಶಾರ್ದುಲ್ ಠಾಕೂರ್(2-51)ತಲಾ ಎರಡು ವಿಕೆಟ್ಗಳನ್ನು ಪಡೆದರು.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್: 471 ರನ್
ಇಂಗ್ಲೆಂಡ್ ಮೊದಲ ಇನಿಂಗ್ಸ್: 465 ರನ್
ಭಾರತ ಎರಡನೇ ಇನಿಂಗ್ಸ್: 364 ರನ್ಗೆ ಆಲೌಟ್
ಇಂಗ್ಲೆಂಡ್ 2ನೇ ಇನಿಂಗ್ಸ್: 82 ಓವರ್ಗಳಲ್ಲಿ 373/5
ಝ್ಯಾಕ್ ಕ್ರಾಲಿ ಸಿ ರಾಹುಲ್ ಬಿ ಪ್ರಸಿದ್ಧ ಕೃಷ್ಣ 65
ಬೆನ್ ಡಕೆಟ್ ಸಿ ಸಬ್ ಬಿ ಠಾಕೂರ್ 149
ಓಲಿ ಪೋಪ್ ಬಿ ಪ್ರಸಿದ್ಧ ಕೃಷ್ಣ 8
ಜೋ ರೂಟ್ ಔಟಾಗದೆ 53
ಹ್ಯಾರಿ ಬ್ರೂಕ್ ಸಿ ಪಂತ್ ಬಿ ಠಾಕೂರ್ 0
ಬೆನ್ ಸ್ಟೋಕ್ಸ್ ಸಿ ಗಿಲ್ ಬಿ ಜಡೇಜ 33
ಜೇಮೀ ಸ್ಮಿತ್ ಔಟಾಗದೆ 44
ಇತರ 21
ವಿಕೆಟ್ ಪತನ: 1-188, 2-206, 3-253, 4-253, 5-302
ಬೌಲಿಂಗ್ ವಿವರ
ಜಸ್ಪ್ರಿತ್ ಬುಮ್ರಾ 19-3-57-0
ಮುಹಮ್ಮದ್ ಸಿರಾಜ್ 14-1-51-0
ರವೀಂದ್ರ ಜಡೇಜ 24-1-104-1
ಪ್ರಸಿದ್ಧ ಕೃಷ್ಣ 15-0-92-2
ಶಾರ್ದುಲ್ ಠಾಕೂರ್ 10-0-51-2