ಮೊದಲ ಟೆಸ್ಟ್ : 16 ವರ್ಷಗಳ ನಂತರ ಇಂಗ್ಲೆಂಡ್ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಪ್ರವಾಸಿ ತಂಡದ ಮೊದಲ ಎಡಗೈ ಸ್ಪಿನ್ನರ್ ಉಸ್ಮಾನ್

ಅಲಿ ಉಸ್ಮಾನ್ |Photo Credit : PTI
ಲೀಡ್ಸ್: ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್ ಅಲಿ ಉಸ್ಮಾನ್ ಐದು ವಿಕೆಟ್ ಗೊಂಚಲು ಪಡೆದರೂ 238 ರನ್ ಇನಿಂಗ್ಸ್ ಮುನ್ನಡೆ ಪಡೆದಿರುವ ಇಂಗ್ಲೆಂಡ್ ತಂಡವು ಮೇಲುಗೈ ಸಾಧಿಸಿದೆ.
ಶುಕ್ರವಾರ 8 ವಿಕೆಟ್ಗಳ ನಷ್ಟಕ್ಕೆ 366 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡವು 89.5 ಓವರ್ಗಳಲ್ಲಿ 409 ರನ್ಗೆ ಆಲೌಟಾಯಿತು. ಪಾಕಿಸ್ತಾನದ ಪರ ಉಸ್ಮಾನ್ 24 ಓವರ್ಗಳಲ್ಲಿ 95 ರನ್ ನೀಡಿ ಐದು ವಿಕೆಟ್ ಪಡೆದರು. ಇಂಗ್ಲೆಂಡ್ನಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದರು.
ಉಸ್ಮಾನ್ 16 ವರ್ಷಗಳ ನಂತರ ಇಂಗ್ಲೆಂಡ್ ನೆಲದಲ್ಲಿ ಐದು ವಿಕೆಟ್ಗಳ ಗೊಂಚಲು ಪಡೆದ ಪ್ರವಾಸಿ ತಂಡದ ಮೊದಲ ಎಡಗೈ ಸ್ಪಿನ್ನರ್ ಎಂಬ ಹಿರಿಮೆಗೆ ಪಾತ್ರರಾದರು. 2010ರಲ್ಲಿ ಇಂಗ್ಲೆಂಡ್ನಲ್ಲಿ ಟೆಸ್ಟ್ ಇನಿಂಗ್ಸ್ವೊಂದರಲ್ಲಿ ಬಾಂಗ್ಲಾದೇಶದ ಬೌಲರ್ ಶಾಕಿಬ್ ಅಲ್ ಹಸನ್ ಐದು ವಿಕೆಟ್ಗಳನ್ನು ಉರುಳಿಸಿದ್ದರು.
ಉಸ್ಮಾನ್ ಅವರು 1972ರ ನಂತರ ಲೀಡ್ಸ್ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಪ್ರವಾಸಿ ತಂಡದ ಮೊದಲ ಸ್ಪಿನ್ನರ್ ಎನಿಸಿಕೊಂಡರು. 1972ರಲ್ಲಿ ಆಸ್ಟ್ರೇಲಿಯದ ಆಶ್ಲೆ ಮಲ್ಲೆಟ್114 ರನ್ಗೆ ಐದು ವಿಕೆಟ್ಗಳನ್ನು ಪಡೆದಿದ್ದರು.
ಇಂಗ್ಲೆಂಡ್ ತಂಡವು 409 ರನ್ಗೂ ಅಧಿಕ ಮೊತ್ತ ಗಳಿಸದಂತೆ ತಡೆದ ಉಸ್ಮಾನ್ ಅವರು ಜೋರ್ಡಾನ್ ಕಾಕ್ಸ್(73 ರನ್), ಹ್ಯಾರಿ ಬ್ರೂಕ್(91 ರನ್), ಡಾನ್ ಲಾರೆನ್ಸ್(51 ರನ್), ಅಟ್ಕಿನ್ಸನ್(3 ರನ್)ಹಾಗೂ ರಾಬಿನ್ಸನ್(0)ವಿಕೆಟ್ಗಳನ್ನು ಉರುಳಿಸಿದ್ದಾರೆ.




