ಫುಟ್ಬಾಲ್ | ಎವರ್ಟನ್ ಅಕಾಡೆಮಿಗೆ 9ರ ಪೋರಿ ಅರ್ಬನ್ ನೇಗಿ ಸೇರ್ಪಡೆ!

ಅರ್ಬನ್ ನೇಗಿ | Image: Instagram
ಲಂಡನ್, ನ.28: ಭಾರತೀಯ ಮೂಲದ ಫುಟ್ಬಾಲ್ ಆಟಗಾರ್ತಿ, ಒಂಭತ್ತು ವರ್ಷದ ಅರ್ಬನ್ ನೇಗಿ ಇಂಗ್ಲೆಂಡ್ ನ ಎವರ್ಟನ್ ಅಕಾಡೆಮಿಯೊಂದಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಸದ್ಯ ಫಿಫಾ ರ್ಯಾಂಕಿಂಗ್ ನಲ್ಲಿ ಕುಸಿತ ಕಂಡಿರುವ, ದೇಶದೊಳಗೆ ಗೊಂದಲಕ್ಕೀಡಾಗಿರುವ ಭಾರತೀಯ ಫುಟ್ಬಾಲ್ ಗೆ ಭರವಸೆಯ ಕಿರಣ ಮೂಡಿಸಿದ್ದಾರೆ.
ಈ ಹಿಂದೆ ಡೈನಮೊ ಯೂತ್ ಎಫ್ಸಿ ಪರ ಆಡಿದ್ದ ದಕ್ಷಿಣ ಲಂಡನ್ನ ಯುವ ಪ್ರತಿಭೆ 2025ರಲ್ಲಿ ಲಿವರ್ ಪೂಲ್ ನಲ್ಲಿರುವ ಫಿಂಚ್ ಫಾರ್ಮ್ ಅಕಾಡೆಮಿಗೆ ಸೇರಿದ್ದರು.
ಅರ್ಬನ್ ನೇಗಿ ಅವರು ವೇಯ್ನ್ ರೂನಿ ಸೇರಿದಂತೆ ಪ್ರಮುಖ ಆಟಗಾರರಿಗೆ ತರಬೇತಿ ನೀಡಿದ ಎವರ್ಟನ್ ಕ್ಲಬ್ ಗೆ ಸೇರಿದ್ದಾರೆ.
Next Story





