ಕೇರಳ ಕ್ರಿಕೆಟ್ ತಂಡದ ಮಾಜಿ ನಾಯಕ ರವಿ ಅಚನ್ ನಿಧನ
![ಕೇರಳ ಕ್ರಿಕೆಟ್ ತಂಡದ ಮಾಜಿ ನಾಯಕ ರವಿ ಅಚನ್ ನಿಧನ ಕೇರಳ ಕ್ರಿಕೆಟ್ ತಂಡದ ಮಾಜಿ ನಾಯಕ ರವಿ ಅಚನ್ ನಿಧನ](https://www.varthabharati.in/h-upload/2024/04/02/1257959-20.webp)
ಪಿ. ರವಿ ಅಚನ್
ತಿರುವನಂತಪುರ : ಕೇರಳ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ರಣಜಿ ಟ್ರೋಫಿಯಲ್ಲಿ ಡಬಲ್ ಸಾಧನೆ (1,000 ರನ್, 100 ವಿಕೆಟ್ ಗಳು) ರಾಜ್ಯದ ಮೊದಲ ಆಲ್ರೌಂಡರ್ ಪಿ. ರವಿ ಅಚನ್ ಸೋಮವಾರ ರಾತ್ರಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.
1928 ಮಾರ್ಚ್ 12ರಂದು ಜನಿಸಿದ್ದ ರವಿ 1952ರಿಂದ 1970ರ ಅವಧಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದರು. 41ನೇ ವಯಸ್ಸಿನ ತನಕ ರಣಜಿ ಪಂದ್ಯ ಆಡಿದ್ದರು. 1969ರಲ್ಲಿ ತಿರುನೆಲ್ವೇಲಿಯಲ್ಲಿ ಮದ್ರಾಸ್ ವಿರುದ್ಧ ಆಡಿರುವ ತನ್ನ ಕೊನೆಯ ಪಂದ್ಯದಲ್ಲಿ ಜೀವನಶ್ರೇಷ್ಠ ಶ್ರೇಷ್ಠ ವೈಯಕ್ತಿಕ ಸ್ಕೋರ್(70 ರನ್)ಗಳಿಸಿದ್ದರು.
ಲೆಗ್ ಸ್ಪಿನ್ ಹಾಗೂ ಮಧ್ಯಮ ವೇಗದೊಂದಿಗೆ ಬೌಲಿಂಗ್ ಮಾಡುತ್ತಿದ್ದ ರವಿ ಅವರು 1960ರಲ್ಲಿ ಗುಂಟೂರ್ನಲ್ಲಿ ಕೇರಳ ತಂಡ ಆಂಧ್ರ ತಂಡವನ್ನು ಸೋಲಿಸಿದ್ದ ಪಂದ್ಯದಲ್ಲಿ ಜೀವನಶ್ರೇಷ್ಠ ಬೌಲಿಂಗ್(6-34) ಮಾಡಿದ್ದರು.
Next Story